ಭದ್ರಾವತಿ: ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ಹಾಗೂ ಪ್ರಕ್ರಿಯೆಯನ್ನು ತಿಳಿಸಿಕೊಡುವ ಉದ್ದೇಶದಿಂದ ನಗರದ ಅಪ್ಪರ್ ವೃತ್ತದಲ್ಲಿರುವ ಅನನ್ಯ ಶಾಲೆಯಲ್ಲಿ ಸಂಸದೀಯ ಚುನಾವಣೆಯ ಮಾದರಿಯಲ್ಲಿ ಶಾಲಾ ಚುನಾವಣೆ ನಡೆಸಲಾಯಿತು.
ಚುನಾವಣೆ ಘೋಷಣೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ವಾಪಸ್ ಪಡೆಯುವುದು, ಮತದಾನ ಹಾಗೂ ಫಲಿತಾಂಶ ಘೋಷಣೆ ಮಾಡುವ ಪ್ರಕ್ರಿಯೆಗಳನ್ನು ನಡೆಸಲಾಯಿತು. ಮೊಬೈಲ್ ಆ್ಯಪ್ ಮೂಲಕ ಚುನಾವಣೆ ನಡೆಸಿ, ಡಿಜಿಟಲ್ ತಂತ್ರಜ್ಞಾನದ ಮಹತ್ವವನ್ನು ತಿಳಿಸಲಾಯಿತು. ಚುನಾವಣೆಗೂ ಮುನ್ನ ಅಭ್ಯರ್ಥಿಗಳು ಪ್ರಣಾಳಿಕೆ ಪ್ರಕಟಿಸಿ ವಿವಿಧ ಆಶ್ವಾಸನೆ ನೀಡಿದ್ದರು.
ಶಾಲಾ ವಿದ್ಯಾರ್ಥಿ ನಾಯಕನ ಸ್ಥಾನಕ್ಕೆ ಜೀವಿತ ಆಯ್ಕೆಯಾದರು. ಮುಖ್ಯ ಚುನಾವಣಾಧಿಕಾರಿಯಾಗಿ ಶಾಲೆಯ ಮುಖ್ಯೋಪಾಧ್ಯಾಯ ಕಲ್ಲೇಶ್ ಕುಮಾರ್, ರಿಟರ್ನಿಂಗ್ ಅಧಿಕಾರಿಯಾಗಿ ದೈಹಿಕ ಶಿಕ್ಷಕ ಎಂ.ಕುಮಾರ್, ಚುನಾವಣಾ ಅಧಿಕಾರಿಗಳಾಗಿ ಸುನಿತಾ, ರಾಧಿಕಾ, ಸಂಗೀತ, ಕಾವ್ಯ, ಭಾರತಿ, ಲತಾ, ಬಿಂದು, ಅಶ್ವಿನಿ ಕಾರ್ಯ ನಿರ್ವಹಿಸಿದರು. ಶಾಲೆಯ ಆಡಳಿತ ಅಧಿಕಾರಿ ವೇಣುಗೋಪಾಲ್ ಮಾರ್ಗದರ್ಶಕರಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.