ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಹತ್ವಪೂರ್ಣ ವಿಚಾರಗಳ ಭಾರತೀಯ ಪರಂಪರೆ: ಪಟ್ಟಾಭಿರಾಮ್

Last Updated 13 ಜುಲೈ 2020, 13:02 IST
ಅಕ್ಷರ ಗಾತ್ರ

ಶಿವಮೊಗ್ಗ: ಭಾರತೀಯ ಪರಂಪರೆಯಲ್ಲಿ ಮಹತ್ವಪೂರ್ಣ ವಿಚಾರಧಾರೆಗಳು ಅಡಗಿವೆ ಎಂದು ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿರಾಮ್ ಹೇಳಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಪಿ.ಕೆ.ಸಂತೋಷ್ ಕುಮಾರ್ ಅವರ ‘ಸಮಾಜ ವಿಜ್ಞಾನ ಮತ್ತು ಕ್ರಿಯಾಜ್ಞಾನ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭಾರತದ ಪರಂಪರೆ ಅತ್ಯುನ್ನತವಾಗಿದೆ. ಪ್ರಪಂಚದ ಇತರೆ ಪರಂಪರೆಗಳಿಗಿಂತವಿಭಿನ್ನವಾಗಿದೆ. ಕೆಲವರು ಭಾರತೀಯ ಪರಂಪರೆಕುರಿತು ಟೀಕಿಸುತ್ತಾರೆ. ಇದು ಸಲ್ಲದು. ಡಾ.ಸಂತೋಷ್ ಕುಮಾರ್ಅವರು ರಚಿಸಿರುವ ಪುಸ್ತಕ ಓದಲು ಸರಳವಾಗಿವೆ. ವಿಚಾರಗಳುಮಹತ್ವ ಪೂರ್ಣವಾಗಿವೆ.185ಕ್ಕೂ ಹೆಚ್ಚು ಆಂಗ್ಲ ಸಾಹಿತ್ಯ, 120ಕ್ಕೂ ಹೆಚ್ಚು ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದಾರೆ. ಇದು ತೋಚಿದ್ದನ್ನು ಗೀಚಿರುವ ಪುಸ್ತಕವಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಭಾರತೀಯ ವಿಚಾರಧಾರೆಗಳು ಅಥವಾ ಕ್ರಿಯಾವಿಧಿಗಳು ಜೀವನದಲ್ಲಿ ಹಾಸುಹೊಕ್ಕಾಗಿವೆ.ಲೇಖಕರು ಸಮರ್ಥವಾಗಿ ನಿರೂಪಿಸಿದ್ದಾರೆ. ಸಮಾಜ ತಿದ್ದುವಲ್ಲಿಲೇಖಕರುಆಸಕ್ತಿ ಶ್ಲಾಘನೀಯ ಎಂದರು.

ಕುವೆಂಪುವಿಶ್ವವಿದ್ಯಾಲಯದನಿವೃತ್ತ ಪ್ರಾಧ್ಯಾಪಕ ಪ್ರೊ.ಜೆ.ಎಸ್.ಸದಾನಂದ, ಪ್ರಾಧ್ಯಾಪಕ ಪ್ರೊ.ಷಣ್ಮುಖಪ್ಪ, ಹಿರಣ್ಣಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT