ಭದ್ರಾವತಿ: ನಗರದಿಂದ ಚೆನ್ನಾಗಿರಿ, ಚಿತ್ರದುರ್ಗ, ಜಗಳೂರು, ಕೊಟ್ಟೂರು, ಮಾರ್ಗವಾಗಿ ಉಜ್ಜಯಿನಿಗೆ ಚಲಿಸುವ ನೂತನ ಬಸ್‌ಗೆ ಶಾಸಕ ಬಿ.ಕೆ. ಸಂಗಮೇಶ್ವರ ಸರ್ಕಾರದಿಂದ ಮತ್ತು ಸಾರಿಗೆ ಇಲಾಖೆ ವತಿಯಿಂದ ಪರವಾನಿಗೆ ಪಡೆದು ಪ್ರಯಾಣಿಕರಿಗೆ ಅನುಕೂಲ ವಾಗುವಂತೆ ಮಾಡಿದರು.
ಮಂಗಳವಾರ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ನೂತನ ಮಾರ್ಗದ ಬಸ್‌ಗೆ ಚಾಲನೆ ನೀಡಿದರು.
ನಗರಸಭಾ ಉಪಾಧ್ಯಕ್ಷ ಮಣಿ, ಸದಸ್ಯರಾದ ಬಿ.ಕೆ. ಮೋಹನ್, ಸುದೀಪ್, ಬಿ.ಕೆ ಜಗನ್ನಾಥ್, ಸಿದ್ದಲಿಂಗಯ್ಯ ಹಾಗೂ ಕೆಎಸ್ಆರ್‌ಟಿಸಿ ಡಿಪೊ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.