ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ: ಜ್ಯುಬಿಲಿ ಸಂಭ್ರಮದ ನಡುವೆ ಎಲ್ಲೆಡೆ ಏಸು ಕ್ರಿಸ್ತನ ಸ್ಮರಣೆ

Published : 25 ಡಿಸೆಂಬರ್ 2025, 5:12 IST
Last Updated : 25 ಡಿಸೆಂಬರ್ 2025, 5:12 IST
ಫಾಲೋ ಮಾಡಿ
Comments
ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಗೋಂದಲಿಯ ನೋಟ
ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಗೋಂದಲಿಯ ನೋಟ
ಫಾದರ್ ಸ್ಟ್ಯಾನಿ ಡಿಸೋಜಾ
ಫಾದರ್ ಸ್ಟ್ಯಾನಿ ಡಿಸೋಜಾ
ಏಸುಕ್ರಿಸ್ತರ ಹುಟ್ಟುಹಬ್ಬಕ್ಕೆ ಈಗ 2025ರ ಜ್ಯುಬಿಲಿ ವರ್ಷಗಳ ಸಂಭ್ರಮ. ಅಂಚಿನಲ್ಲಿರುವ ಜನರ ಹಿತಕ್ಕೆ ಪ್ರಾರ್ಥಿಸಿ ಅವರ ಬದುಕಿಗೆ ಭರವಸೆ ತುಂಬುವ ನಿಟ್ಟಿನಲ್ಲಿ ಪರಸ್ಪರ ಅನ್ಯೋನ್ಯತೆ ಸಹಬಾಳ್ವೆ ಸಹಭಾಗಿತ್ವದಿಂದ ಬದುಕುವ ಆಶಯದಿಂದ ಈ ಬಾರಿಯ ಕ್ರಿಸ್‌ಮಸ್‌ ಆಚರಿಸುತ್ತಿದ್ದೇವೆ.
ಫಾದರ್ ಸ್ಟ್ಯಾನಿ ಡಿಸೋಜಾ ಧರ್ಮಗುರು ಸೇಕ್ರೆಡ್ ಹಾರ್ಟ್ ಚರ್ಚ್ ಶಿವಮೊಗ್ಗ
ಭರವಸೆಯ ವರ್ಷದ ಆಚರಣೆ
ಡಿ.28ಕ್ಕೆ ಏಸುಕ್ರಿಸ್ತರು ಹುಟ್ಟಿ 2025 ವರ್ಷಗಳಾಗುತ್ತವೆ. ಹೀಗಾಗಿ ಇದು ಜ್ಯುಬಿಲಿ ವರ್ಷ. ಅದರ ಖುಷಿಗೆ ಈ ಬಾರಿ ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡುಮಿಂಗ್ ಡಯಾಸ್ ಅವರ ನೇತೃತ್ವದಲ್ಲಿ ಡಿಸೆಂಬರ್ 28ರಂದು ‘ಭರವಸೆಯ ವರ್ಷ’ ಎಂದು ಆಚರಿಸುತ್ತೇವೆ ಎಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್‌ ಚರ್ಚ್‌ನ ಫಾದರ್ ಸ್ಟ್ಯಾನಿ ಡಿಸೋಜಾ ಹೇಳುತ್ತಾರೆ. ಅಂದು ಶಿವಮೊಗ್ಗ ಧರ್ಮ ಕ್ಷೇತ್ರದ ವ್ಯಾಪ್ತಿಯ ದಾವಣಗೆರೆ ಚಿತ್ರದುರ್ಗ ಜಿಲ್ಲೆಗಳಿಂದಲೂ ಸುಮಾರು 40ಕ್ಕೂ ಹೆಚ್ಚು ಧರ್ಮ ಗುರುಗಳು ಶಿವಮೊಗ್ಗದ ಸೇಕ್ರೆಡ್ ಹಾರ್ಟ್‌ ಚರ್ಚ್‌ನಲ್ಲಿ ವಿಶೇಷ ಆರಾಧನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT