ಶಿವಮೊಗ್ಗ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗ ಹಣೆಗೆ ಸಿಂಧೂರವನ್ನಿಟ್ಟುಕೊಂಡರೋ ಆಗಲೇ ಅವರಿಗಿದ್ದ ಹುಚ್ಚು ಬಿಟ್ಟಿದೆ. ಹಾಗಾಗಿ ಸಿದ್ದರಾಮಯ್ಯ ಬುದ್ಧಿ ಭ್ರಮಣೆಯಿಂದ ಗುಣವಾಗಿದ್ದಾರೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.

‘ಕಾಂಗ್ರೆಸ್ನಲ್ಲಿ ಮೂರು ರೀತಿಯ ಹುಚ್ಚರಿದ್ದಾರೆ. ಕೆಲವರು ಅರೆ ಹುಚ್ಚರು, ಕೆಲವರು ಪೂರ್ಣ ಹುಚ್ಚರು, ಮತ್ತೆ ಕೆಲವರಿಗೆ ಹುಚ್ಚು ಬಿಟ್ಟಿದೆ. ಹೀಗೆ ಹುಚ್ಚುಬಿಟ್ಟವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದು ಸಂತೋಷದ ಸಂಗತಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

‘ಇತ್ತೀಚಿನ ಆಪರೇಷನ್ ಸಿಂಧೂರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಮನಸ್ಸಿಗೆ ಬಂದಂತೆ ಹುಚ್ಚಾಟದ ರೀತಿ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ದೇಶಪ್ರೇಮವೇ ಮರೆತು ಹೋಗಿದೆ. ಈ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನ್ಯಾಯಾಲಯದ ಆದೇಶದಂತೆ ನಗರದ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ಎದುರಿನ ಜಾಗವು ಮಹಾನಗರ ಪಾಲಿಕೆಗೆ ಸೇರಿದೆ. ಈ ಜಾಗದಲ್ಲಿ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಬೇಕು’ ಎಂದು ಈಶ್ವರಪ್ಪ ಆಗ್ರಹಿಸಿದರು.

ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗ ಶಾಸ್ತ್ರಿ, ಈ. ವಿಶ್ವಾಸ್, ಎಂ. ಶಂಕರ್, ಬಾಲು, ರಮೇಶ್, ವಾಗೀಶ್, ಉಮೇಶ್ ಆರಾಧ್ಯ, ಜಾದವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.