ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

210 ಮಂದಿಗೆ ಸೋಂಕು ಪತ್ತೆ, ಶಿವಮೊಗ್ಗ ನಗರದಲ್ಲೇ 138 ಪ್ರಕರಣ

Last Updated 10 ಆಗಸ್ಟ್ 2020, 16:09 IST
ಅಕ್ಷರ ಗಾತ್ರ

ಶಿವಮೊಗ್ಗ: ತಾಲ್ಲೂಕು ಕಚೇರಿ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿ ಸೋಮವಾರ 210 ಮಂದಿಗೆಕೊರೊನಾಸೋಂಕು ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. 96 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 138 ಜನರಿಗೆ ಸೋಂಕು ತಗುಲಿದೆ. ಭದ್ರಾವತಿಯಲ್ಲಿ 33, ಶಿಕಾರಿಪುರದಲ್ಲಿ 11, ಸಾಗರದಲ್ಲಿ 1, ತೀರ್ಥಹಳ್ಳಿಯಲ್ಲಿ 4, ಹೊಸನಗರ 9, ಸೊರಬ 3, ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರಜಿಲ್ಲೆಯ 11 ಜನರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 3,057ಕ್ಕೆ ಏರಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾದ 96 ಸೇರಿ ಇದುವರೆಗೆ 1,827 ಮಂದಿ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 192, ಖಾಸಗಿ ಆಸ್ಪತ್ರೆಗಳಲ್ಲಿ 169 ಸೇರಿ ಒಟ್ಟು 1,168 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 62 ಜನರು ಮೃತಪಟ್ಟಿದ್ದಾರೆ.

74 ಜನರು ಗುಣಮುಖ (ಸಾಗರ ವರದಿ):ತಾಲ್ಲೂಕಿನಲ್ಲಿ ಸೋಮವಾರದ ಮೂವರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.ಸಿರಿವಂತೆ ಗ್ರಾಮದ 26 ವರ್ಷದ ಪುರುಷ, ಆನಂದಪುರಂನ 64 ವರ್ಷದ ಮಹಿಳೆ, 62 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 119 ಕ್ಕೆ ಏರಿದ್ದು, 74 ಮಂದಿ ಗುಣಮುಖರಾಗಿದ್ದಾರೆ.

ಪತಿ, ಪತ್ನಿಗೆಕೊರೊನಾ ಸೋಂಕು (ಶಿಕಾರಿಪುರ ವರದಿ):ತಾಲ್ಲೂಕಿನಲ್ಲಿ 9 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.ಶಿಕಾರಿಪುರ ಪಟ್ಟಣದ ಗಗ್ರಿ ಬಡಾವಣೆಯ ಮಹಿಳೆಗೆ, ದಾಸರಕೇರಿಯ ಪತಿ, ಪತ್ನಿಗೆ, ವಿನಾಯಕ ನಗರ ನಿವಾಸಿ ಪುರುಷನಿಗೆ, ತಾಲ್ಲೂಕಿನ ಮುಳುಕೊಪ್ಪದಲ್ಲಿ ದಂಪತಿಗೆ, ಬೇಗೂರಿನಲ್ಲಿ ಪುರುಷನಿಗೆ, ಹಿತ್ತಲದಲ್ಲಿ ಇಬ್ಬರು ಪುರುಷರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕೆಎಸ್ಆರ್‌ಟಿಸಿ ಡಿಪೊ ಸಿಬ್ಬಂದಿಗೆ ಸೋಂಕು‌‌‌ (ಭದ್ರಾವತಿ ವರದಿ):ತಾಲ್ಲೂಕಿನಲ್ಲಿಸೋಮವಾರ 20 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕಣಕಟ್ಟೆ 29 ವರ್ಷದ ಮಹಿಳೆ, ಹನುಮಂತ ನಗರದ 39 ವರ್ಷದ ಮಹಿಳೆ, ಹೊಸಬುಳ್ಳಾಪುರ 24 ವರ್ಷದ ಮಹಿಳೆ, ಕಬಳಿಕಟ್ಟೆಯ 45 ವರ್ಷದ ಪುರುಷ, 37 ವರ್ಷದ ಮಹಿಳೆ, ಬೋವಿಕಾಲೊನಿ 25 ವರ್ಷದ ಮಹಿಳೆ, ಕೆಎಸ್ಆರ್‌ಟಿಸಿ ಡಿಪೊ29 ಹಾಗೂ 49 ವರ್ಷದ ಪುರುಷ ನೌಕರರು, ಜನ್ನಾಪುರ 45 ವರ್ಷದ ಹಾಗೂ 36 ವರ್ಷದ ಪುರುಷ, ಹೊಸಮನೆ 32 ವರ್ಷದ ಪುರುಷ, ಸುಭಾಷ್ ನಗರ 39 ವರ್ಷದ ಮಹಿಳೆ, ತರೀಕೆರೆ ರಸ್ತೆ 34 ವರ್ಷದ ಪುರುಷ, ವೀರಾಪುರ 48 ವರ್ಷದ ಮಹಿಳೆ, ಕಾಗದ ನಗರ 45 ವರ್ಷದ ಪುರುಷ, ಕಡದಕಟ್ಟೆ 62 ವರ್ಷದ ಮಹಿಳೆ, ಅನ್ವರ್ ಕಾಲೊನಿ 60 ವರ್ಷದ ಪುರುಷ, ನ್ಯೂಟನ್ 52 ವರ್ಷದ ಮಹಿಳೆ, ಬಾರಂದೂರು 36 ವರ್ಷದ ಮಹಿಳೆ, ಹೊಸ ಸಿದ್ದಾಪುರ 29 ವರ್ಷದ ಪುರುಷನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ತಾಲ್ಲೂಕು ಕಚೇರಿಯಲ್ಲಿ 10 ಮಂದಿಗೆ ಪಾಸಿಟಿವ್ ಬಂದಿದೆ. ಟಪಾಲು ವಿಭಾಗದ ಸಿಬ್ಬಂದಿಯಲ್ಲಿ ಪಾಸಿಟಿವ್ ಪತ್ತೆ ನಂತರ ಪರೀಕ್ಷೆಗೆ ಒಳಪಟ್ಟ 27 ಮಂದಿ ಸಿಬ್ಬಂದಿಯಲ್ಲಿ 10 ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಗುರುವಾರವರೆಗೆ ಸಾರ್ವಜನಿಕರಿಗೆ ತಾಲ್ಲೂಕು ಕಚೇರಿ ಪ್ರವೇಶ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT