ಬೆಂಗಳೂರಿನ ಬ್ಯಾಟರಾಯನ ಪುರದ ಬಂದೋಬಸ್ತ್ಗೆ ತೆರಳಿದ್ದ ಮೀಸಲು ಪೊಲೀಸ್ ಪಡೆಯ 22 ವರ್ಷ (ಪಿ–3302), 23 ವರ್ಷ (ಪಿ–3303), 29 ವರ್ಷ(ಪಿ–3304), 29 ವರ್ಷ(ಪಿ–3305), 24 ವರ್ಷ(ಪಿ–3306), 52 ವರ್ಷ(ಪಿ–3309), 49 ವರ್ಷದ(ಪಿ–3310), ಪುರುಷ ಪೊಲೀಸರಿಗೆ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಇವವೆಲ್ಲ ಐದು ದಿನಗಳ ಹಿಂದೆ ಮಾಚೇನಹಳ್ಳಿ ಜಯಂತಿನಗರದ ತರಬೇತಿ ಕೇಂದ್ರದ ವಸತಿ ಗೃಹಕ್ಕೆ ಹಿಂದಿರುಗಿದ್ದರು. ಮೂವರಿಗೆ ಎರಡು ದಿನಗಳ ಹಿಂದೆ ವೈರಸ್ ಇರುವುದು ಪತ್ತೆಯಾಗಿತ್ತು. ಅಲ್ಲಿಗೆ ಮೀಸಲು ಪಡೆಯ 10 ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ.