ಭಾನುವಾರ, ಜುಲೈ 25, 2021
22 °C
ಜಿಲ್ಲೆಯಲ್ಲಿ ಅರ್ಧ ಶತಕ ದಾಟಿದ ಕೋವಿಡ್‌ ಪೀಡಿತರ ಸಂಖ್ಯೆ

ಶಿವಮೊಗ್ಗ | ವೈದ್ಯೆ, ಪೊಲೀಸರೂ ಸೇರಿ 9 ಜನರಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರ ಒಬ್ಬರು ವೈದ್ಯೆ, ಏಳು ಮಂದಿ ಪೊಲೀಸರು ಸೇರಿದಂತೆ 9 ಜನರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅಲ್ಲಿಗೆ ಸೋಂಕಿತರ ಸಂಖ್ಯೆ ಅರ್ಧ ಶತಕ (51) ದಾಟಿದೆ. ಸೋಮವಾರ ಇಬ್ಬರು ಸೇರಿ 26 ಜನರು ಗುಣಮುಖರಾಗಿದ್ದಾರೆ.

ಬೆಂಗಳೂರಿನ ಬ್ಯಾಟರಾಯನ ಪುರದ ಬಂದೋಬಸ್ತ್‌ಗೆ ತೆರಳಿದ್ದ ಮೀಸಲು ಪೊಲೀಸ್ ಪಡೆಯ 22 ವರ್ಷ (ಪಿ–3302), 23 ವರ್ಷ (ಪಿ–3303), 29 ವರ್ಷ (ಪಿ–3304), 29 ವರ್ಷ (ಪಿ–3305), 24 ವರ್ಷ (ಪಿ–3306), 52 ವರ್ಷ (ಪಿ–3309), 49 ವರ್ಷದ (ಪಿ–3310), ಪುರುಷ ಪೊಲೀಸರಿಗೆ ಕೊರೊನಾ ವೈರಸ್‌ ಇರುವುದು ಪತ್ತೆಯಾಗಿದೆ. ಇವವೆಲ್ಲ ಐದು ದಿನಗಳ ಹಿಂದೆ ಮಾಚೇನಹಳ್ಳಿ ಜಯಂತಿನಗರದ ತರಬೇತಿ ಕೇಂದ್ರದ ವಸತಿ ಗೃಹಕ್ಕೆ ಹಿಂದಿರುಗಿದ್ದರು. ಮೂವರಿಗೆ ಎರಡು ದಿನಗಳ ಹಿಂದೆ ವೈರಸ್‌ ಇರುವುದು ಪತ್ತೆಯಾಗಿತ್ತು. ಅಲ್ಲಿಗೆ ಮೀಸಲು ಪಡೆಯ 10 ಪೊಲೀಸರು ಸೋಂಕಿಗೆ ಒಳಗಾಗಿದ್ದಾರೆ.

ಕುಂಸಿ ಸಮೀಪದ ಬಾಳೆಕೊಪ್ಪದ ಪಿ.1305 ರೋಗಿಗೆ ಚಿಕಿತ್ಸೆ ನೀಡಿದ ಆಯನೂರು ಆಸ್ಪತ್ರೆಯ 30 ವರ್ಷದ ವೈದ್ಯೆಗೂ (ಪಿ–3307) ಸೋಂಕು ತಗುಲಿದೆ. ಮೇ 21ರಂದು ರೋಗಿಗೆ ಚಿಕಿತ್ಸೆ ನೀಡಿದ್ದರು. ಅವರಿಗೆ ಸೋಂಉ ಪತ್ತೆಯಾದ ನಂತರ ಕ್ವಾರಂಟೈನ್‌ನಲ್ಲಿ ಇದ್ದರು. 52 ವರ್ಷದ (ಪಿ–3308) ಪುರುಷರೊಬ್ಬರಿಗೆ ಸೋಂಕು ತಗುಲಿದ ಮೂಲ ಪತ್ತೆ ಹಚ್ಚಲಾಗುತ್ತಿದೆ. 

ಇಬ್ಬರು ಬಿಡುಗಡೆ: ಇಬ್ಬರು ಪಿ–810, ಪಿ–995 ಸಂಖ್ಯೆಯ ಕೋವಿಡ್‌ ರೋಗಿಗಳು ಸೋಮವಾರ ಗುಣಮುಖರಾಗಿದ್ದಾರೆ. ಅವರನ್ನು ಅಂಬೆಲೆನ್ಸ್‌ನಲ್ಲಿ ಮನೆಗೆ ಕಳುಹಿಸಲಾಯಿತು. 14 ದಿನಗಳು ಮನೆಯಲ್ಲೇ ಇರಬೇಕು. ಎಲ್ಲೂ ಹೊರಗೆ ಸುತ್ತಾಡಬಾರದು ಎಂದು ಸೂಚಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು