ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಎರಡು ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರು

ಜನಪ್ರತಿನಿಧಿಗಳಿಗೂ ತಗುಲಿದ ಸೋಂಕು, ಒಂದೇ ದಿನ 112 ಮಂದಿಗೆ ದೃಢ
Last Updated 3 ಆಗಸ್ಟ್ 2020, 15:40 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನ ಪರಿಷತ್‌ ಸದಸ್ಯ, ಮಾಜಿ ಸದಸ್ಯ ಸೇರಿಜಿಲ್ಲೆಯಲ್ಲಿ ಸೋಮವಾರ112 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.32 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 61 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ23, ಶಿಕಾರಿಪುರದಲ್ಲಿ 13, ಸಾಗರ 6, ಸೊರಬ 5, ಹೊಸನಗರದಲ್ಲಿ 4 ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್‌ ಆಸ್ಪತ್ರೆಗೆ ಬಂದಿದ್ದ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 2094 ಕ್ಕೆ ಏರಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 32 ಮಂದಿ ಸೇರಿ 1,095 ಮಂದಿ ಗುಣಮುಖರಾಗಿದ್ದಾರೆ. ಮನೆಯಲ್ಲಿ 80, ಖಾಸಗಿ ಆಸ್ಪತ್ರೆಗಳಲ್ಲಿ 53 ಜನರು ಸೇರಿ ಒಟ್ಟು 956 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 43 ಜನರು ಮೃತಪಟ್ಟಿದ್ದಾರೆ.

395 ಕಂಟೈನ್‌ಮೆಂಟ್ ಝೋನ್‌: ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದ ಪ್ರದೇಶಗಳಲ್ಲಿ ಒಟ್ಟು 395 ಕಂಟೈನ್‌ಮೆಂಟ್‌ ಝೋನ್‌ಗಳನ್ನು ಮಾಡಲಾಗಿದೆ. 101 ಝೋನ್‌ಗಳನ್ನು ತೆರವುಗೊಳಿಸಲಾಗಿದೆ.

ಇಬ್ಬರಿಗೆ ಪಾಸಿಟಿವ್ (ತೀರ್ಥಹಳ್ಳಿ ವರದಿ):ತಾಲ್ಲೂಕಿನ ಆಗುಂಬೆಯ 22 ವರ್ಷದ ಯುವಕ ಹಾಗೂ ಮಲ್ಲಂದೂರು ಗ್ರಾಮದ 49 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ಸೋಮವಾರ ದೃಢಪಟ್ಟಿದೆ. ತಾಲ್ಲೂಕಿನಲ್ಲಿ ಸೋಮವಾರ 139 ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಸಲಾಗಿತ್ತು.

ಒಂದೇಕುಟುಂಬದಐವರಿಗೆ ಸೋಂಕು (ರಿಪ್ಪನ್ ಪೇಟೆ ವರದಿ)

ಪಟ್ಟಣದ ವಿದ್ಯಾ ನಗರದ ಪತಿ, ಪತ್ನಿ ಸೇರಿ ಒಂದೇ ಕುಟುಂಬದಐವರಲ್ಲಿಸೋಂಕುಧೃಡಪಟ್ಟಿದೆ. 60 ವರ್ಷದ ಪುರುಷ (ಪತಿ), 65 ವರ್ಷದ ಮಹಿಳೆ (ಪತ್ನಿ), 36 ವರ್ಷದ ಮಹಿಳೆ, 20 ವರ್ಷದ ಯುವತಿ, 18 ವರ್ಷದ ಬಾಲಕ, ಹಾಗೂ ವಡಗೆರೆ ಗ್ರಾಮದ 50 ವರ್ಷದ ವ್ಯಕ್ತಿ ಸೇರಿ ಒಟ್ಟು ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.ಇವರನ್ನು ಶಿವಮೊಗ್ಗದ ಕೋವಿಡ್ ಚಿಕಿತ್ಸಾ ಘಟಕಕ್ಕೆ ರವಾನಿಸಲಾಗಿದೆ.

ಪೊಲೀಸ್ ಕಾನ್‌ಸ್ಟೆಬಲ್‌ಪಾಸಿಟಿವ್ (ಸಾಗರ ವರದಿ)

ತಾಲ್ಲೂಕಿನಲ್ಲಿ ನಗರ ಪೊಲೀಸ್ ಠಾಣೆಯ 35 ವರ್ಷದ ಕಾನ್‌ಸ್ಟೆಬಲ್ ಸೇರಿ ಆರು ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಸಿಗಂದೂರು ಸೇತುವೆ ಕಾಮಗಾರಿ ಕೆಲಸಕ್ಕೆ ಬಂದಿರುವ ಉತ್ತರ ಪ್ರದೇಶ ಹಾಗೂ ಬಿಹಾರದ ಮೂವರು ಪುರುಷ ಕಾರ್ಮಿಕರಿಗೆ ಸೋಂಕು ತಗುಲಿದೆ. ಅಶೋಕ ರಸ್ತೆಯ 35 ವರ್ಷದ ಗರ್ಭಿಣಿ, ಚಾಮರಾಜಪೇಟೆ ಬಡಾವಣೆಯ 21 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ತಾಲ್ಲೂಕಿನಲ್ಲಿ ಪ್ರಕರಣಗಳ ಸಂಖ್ಯೆ 85 ಕ್ಕೆ ಏರಿದ್ದು 47 ಮಂದಿ ಗುಣಮುಖರಾಗಿದ್ದಾರೆ.

15 ಮಂದಿಗೆ ಸೋಂಕು (ಶಿಕಾರಿಪುರ ವರದಿ)

ತಾಲ್ಲೂಕಿನಲ್ಲಿ 15ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದೆ.ಪಟ್ಟಣದಲ್ಲಿ ಮೃತಪಟ್ಟಿದ್ದ 63 ವರ್ಷ ಹಾಗೂ 38 ವರ್ಷದ ಪುರುಷರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೊಸೂರಿನ 4 ಮಂದಿಗೆ, ಮಳವಳ್ಳಿ 3 ಮಂದಿಗೆ, ತೊಗರ್ಸಿಯ 3ಮಂದಿಗೆ, ಸುಣ್ಣದ ಕೊಪ್ಪದ ಒಬ್ಬರಿಗೆ, ಶಿರಾಳಕೊಪ್ಪ ಇಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಪಿಎಸ್‌ಐಗೆ ಸೋಂಕು (ಭದ್ರಾವತಿ ವರದಿ)

ಪಿಎಸ್ಐ, ಟ್ರಾಫಿಕ್ ಪೊಲೀಸ್ ಸೇರಿ 22 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಗಣೇಶ ಕಾಲೊನಿಯ ಒಂದೇ ಕುಟುಂಬದ 66 ವರ್ಷದ ಪುರುಷ, 60 ವರ್ಷದ ಮಹಿಳೆ, 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ‌‌‌‌‌‌ಹೊಸಮನೆ ಪೊಲೀಸ್ ಠಾಣೆ 53 ವರ್ಷದ ಪಿಎಸ್ಐ, 50 ವರ್ಷದ ಟ್ರಾಫಿಕ್ ಪೊಲೀಸ್ ಗೆ ಪಾಸಿಟಿವ್ ಬಂದಿದೆ.

ತರೀಕೆರೆ ರಸ್ತೆ ಎಂಎಂ ಕಾಂಪೌಂಡ್ 43 ವರ್ಷದ ಪುರುಷ, ಹುತ್ತಾಕಾಲೋನಿ 33 ವರ್ಷದ ಪುರುಷ, 31 ವರ್ಷದ ಗಂಡು, ಹೊಸಮನೆ ಸೆಂಟ್‌ಮೇರಿಸ್‌ಶಾಲೆ ಸಮೀಪದ 74 ವರ್ಷದ ವೃದ್ಧ, ವಿಶ್ವೇಶ್ವರ ನಗರದ 29 ವರ್ಷದ ಪುರುಷ, ಬಂಡಿಗುಡ್ಡ , ದೇವರನರಸೀಪುರ, ಹೊಸಮನೆ, ಬಿಎಚ್ ರಸ್ತೆ 7‌ನೇ ತಿರುವು,ಕಬಳಿಕಟ್ಟೆ ಭಾಗದ ಪುರುಷರಿಗೆ ಸೋಂಕು ತಗುಲಿದೆ. ಡಿಆರ್ ವಿಭಾಗದಲ್ಲಿ 45 ವರ್ಷದ ಪುರುಷ, ವೇಲೂರುಶೆಡ್ 55 ವರ್ಷ ಹಾಗೂ 23 ವರ್ಷದ ಮಹಿಳೆ, ಸಿದ್ದಾರೂಡನಗರ 52 ಪರುಷ, ಹಳೇನಗರ ಬ್ರಾಹ್ಮಣ ರ ಬೀದಿ 53 ವರ್ಷದ ಪುರುಷನಿಗೆ ಕೊರೊನಾ ಕಾಣಿಸಿಕೊಂಡಿದೆ.

ನಾಲ್ಕು ಜನರಿಗೆ ಸೋಂಕು (ಸೊರಬ ವರದಿ)

ತಾಲ್ಲೂಕಿನ ದೊಡ್ಡಿಕೊಪ್ಪ ಗ್ರಾಮದ ಒಂದು ವರ್ಷದ ಮಗು ಸೇರಿದಂತೆ ‌ನಾಲ್ಕು ಜನರಿಗೆ ಕೊರಾನಾ ಸೋಂಕು ದೃಢಪಟ್ಟಿದೆ.

ತಾಲ್ಲೂಕಿನ ದೊಡ್ಡಿಕೊಪ್ಪ ಗ್ರಾಮದ 1 ವರ್ಷದ ಹೆಣ್ಣು ಮಗು, 58 ವರ್ಷದ ಮಹಿಳೆ, 38 ವರ್ಷದ ಪುರುಷ ಹಾಗೂ ಚಿಟ್ಟೂರು ಗ್ರಾಮದ 51 ವರ್ಷದ ಪುರುಷನಿಗೆ ಕೊರಾನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಾಲ್ಲೂಕಿನಲ್ಲಿ ಒಟ್ಟು ಕೊರಾನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT