ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರ ಒಂದೇ 168 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದಾರೆ. 120 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ನಗರದಲ್ಲೇ 67 ಜನರಿಗೆ ಸೋಂಕು ಪತ್ತೆಯಾಗಿದೆ. ಭದ್ರಾವತಿಯಲ್ಲಿ 47, ಶಿಕಾರಿಪುರದಲ್ಲಿ 27, ತೀರ್ಥಹಳ್ಳಿ 10, ಸಾಗರದಲ್ಲಿ 11, ಸೊರಬ, ಹೊಸನಗರದಲ್ಲಿ ಇಬ್ಬರು ಹಾಗೂ ಚಿಕಿತ್ಸೆಗಾಗಿ ಇಲ್ಲಿನ ಮೆಗ್ಗಾನ್ ಆಸ್ಪತ್ರೆಗೆ ಬಂದಿದ್ದ ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ಇರುವುದು ಖಚಿತವಾಗಿದೆ.

ಒಟ್ಟು ಸೋಂಕಿತರ ಸಂಖ್ಯೆ 2,363ಕ್ಕೆ ಏರಿದೆ. ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡ 120 ಮಂದಿ ಸೇರಿ 1279 ಮಂದಿ ಗುಣಮುಖರಾಗಿದ್ದಾರೆ. ಮನೆಗಳಲ್ಲಿ 105, ಖಾಸಗಿ ಆಸ್ಪತ್ರೆಗಳಲ್ಲಿ 64 ಜನರು ಸೇರಿ ಒಟ್ಟು 1036 ಜನರು ವಿವಿಧ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 48 ಜನರು ಮೃತಪಟ್ಟಿದ್ದಾರೆ.

24 ಪಾಸಿಟಿವ್ (ಭದ್ರಾವತಿ ವರದಿ):

ತಾಲ್ಲೂಕಲ್ಲಿ ಬುಧವಾರ 24 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಾರ್ವಜನಿಕ ಆಸ್ಪತ್ರೆ , ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದ ರ‍್ಯಾಪಿಡ್ ಪರೀಕ್ಷೆಯಲ್ಲಿ 24 ಜನರಿಗೆಸೋಂಕುಇರುವುದುದೃಢಪಟ್ಟಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ 7, ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ತಳ್ಳಿಕಟ್ಟೆ 4, ಜನ್ನಾಪುರ 11, ಮಾರಶೆಟ್ಟಿಹಳ್ಳಿ 2 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ.

ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿಗೆಸೋಂಕು (ಶಿಕಾರಿಪುರ ವರದಿ): ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಹಾಗೂ ಅವರ ಪತ್ನಿ ಸೇರಿದಂತೆ ತಾಲ್ಲೂಕಿನಲ್ಲಿ 15 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಬುಧವಾರ ದೃಢಪಟ್ಟಿದೆ.

ಶಿಕಾರಿಪುರ ಪಟ್ಟಣ, ಚನ್ನಕೇಶವ ನಗರದ ಪುರುಷನಿಗೆ, ಗೋರಿಕೇರಿಯ ಮಹಿಳೆಗೆ, ಸೊಸೈಟಿ ಕೇರಿಯ ಪುರುಷನಿಗೆ ಹಾಗೂ ಒಬ್ಬ ಮಹಿಳೆಗೆ, ಬಸ್ನಿಲ್ದಾಣ ಸಮೀಪದ ನಿವಾಸಿ ಒಬ್ಬ ಮಹಿಳೆಗೆ, ಶಿರಾಳಕೊಪ್ಪದ ಪಟ್ಟಣದ ಪುರುಷ ಹಾಗೂ ಮಹಿಳೆಗೆ, ಮತ್ತಿಕೋಟೆಯ ಮಹಿಳೆಗೆ, ಕೊರಟಗೆರೆಯ ಪುರುಷನಿಗೆ, ತೊಗರ್ಸಿ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮದಲ್ಲಿ ಒಬ್ಬರಿಗೆ, ಸಾಲೂರು ಗ್ರಾಮದಲ್ಲಿ ಮಹಿಳೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಐದು ಪ್ರಕರಣ ಪಾಸಿಟಿವ್ (ಸಾಗರ ವರದಿ):

ತಾಲ್ಲೂಕಿನಲ್ಲಿ ಬುಧವಾರ ಐದು ಕೊರೊನಾ ಪ್ರಕರಣ ಪತ್ತೆಯಾಗಿದೆ.ಹಸಿರುಮಕ್ಕಿ ಸೇತುವೆ ಕಾಮಗಾರಿ ಕೆಲಸಕ್ಕೆ ಬಂದಿರುವ ಬಿಹಾರ ಮೂಲದ ಮೂವರು ಪುರುಷರಿಗೆ ಸೋಂಕು ದೃಢಪಟ್ಟಿದೆ.ಅಡೂರಿನ35 ವರ್ಷದ ಮಹಿಳೆ, ನಗರದ ನೆಹರೂ ನಗರ ಬಡಾವಣೆಯ 59 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.