ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸ್ಥೈರ್ಯದ ಮುಂದೆ ಕೊರೊನಾ ಸಣ್ಣದು

ಕಲ್ಲಗಂಗೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ವಿನಯಾನಂದ ಸರಸ್ವತಿ
Last Updated 20 ಜುಲೈ 2020, 12:15 IST
ಅಕ್ಷರ ಗಾತ್ರ

ಶಿವಮೊಗ್ಗ: ಆತ್ಮಸ್ಥೈರ್ಯ ಇದ್ದರೆ ಯಾವ ಸೋಂಕೂಏನು ಮಾಡುವುದಿಲ್ಲ. ರೋಗನಿರೋಧ ಶಕ್ತಿ ಮುಂದೆ ಕೊರೊನಾ ಸೋಂಕು ತುಂಬಾ ಸಣ್ಣದು.

ಕೊರೊನಾ ಸೋಂಕು ಬಂದು ಗುಣಮುಖರಾಗಿರುವ ಕಲ್ಲಗಂಗೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಶ್ರೀ ವಿನಯಾನಂದ ಸರಸ್ವತಿ ಅವರ ಧೈರ್ಯ ತುಂಬಿದ ಮಾತುಗಳಿವು.

ಕೆಮ್ಮು ಹೆಚ್ಚಿದ್ದರಿಂದ ನಾನೇ ಹೋಗಿ ಪರೀಕ್ಷೆ ಮಾಡಿಕೊಂಡೆ. ನಂತರ ವೈದ್ಯರೇಕರೆ ಮಾಡಿ ನಿಮಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದರು. ಆಸ್ಪತ್ರೆಗೆ ದಾಖಲಾದೆ. ಅಲ್ಲಿ ಹೋದಾಗ ಮೂರು ದಿನ ಅಲೋಪತಿ ಚಿಕಿತ್ಸೆ ತೆಗೆದುಕೊಳ್ಳುತ್ತಿದೆ. ಆ ಮೇಲೆ ಅಯುರ್ವೇದ ಔಷಧಿಗಾಗಿ ಸರ್ಕಾರಕ್ಕೆ ಪತ್ರ ಬರೆದೆ. ಆರ್ಯುವೇದ ಔಷಧಿ ತೆಗೆದುಕೊಳ್ಳಲು ತಡವಾಗಿ ಅನುಮತಿ ನೀಡಿದರು. ಕೊನೆಗೆ ಅಲೋಪತಿ ಜೊತೆಗೆ ಅಯುರ್ವೇದ ತೆಗೆದುಕೊಂಡೆಎಂದು ವಿವರಿಸಿದರು.

ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು, ನರ್ಸ್‌ಗಳೇಆತಂಕದಲ್ಲಿದ್ದಾರೆ ಎಂಬುದು ಆಸ್ಪತ್ರೆ ದಾಖಲಾಗಿದ್ದಾಗ ಅರಿವಿಗೆ ಬಂತು. ವೈದ್ಯರು ಸೋಂಕಿತರ ಬಳಿ ಬರುತ್ತಿರಲಿಲ್ಲ. ತರಬೇತಿ ಪಡೆಯುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳು ಆತಂಕದಲ್ಲೇವಿಚಾರಿಕೊಂಡು ಹೋಗುತ್ತಿದ್ದರು. ಆಗ ತಾವು ಮನುಷ್ಯನಲ್ಲಿರುವ ರೋಗ ನಿರೋಧಕ ಶಕ್ತಿ ಮುಂದೆ ಈ ವೈರಸ್ ತುಂಬ ಸಣ್ಣದು ಎಂದು ಅಲ್ಲಿರುವ ಸೋಂಕಿತರಿಗೆಧೈರ್ಯ ತುಂಬುತ್ತಿದ್ದೆ ಎಂದು ಮಾಹಿತಿ ನೀಡಿದರು.

ಸೋಂಕು ತಡೆಗೆ ಪಂಚ ಸೂತ್ರ

ಗಂಟೆಗೆ ಒಂದು ಬಾರಿ ಬಿಸಿನೀರು ಸೇವನೆ, ಎರಡನೆಯದು ಬಿಸಿ ನೀರಿನಿಂದ ಗಂಟಲು ಮುಕ್ಕಳಿಸುವುದು, ಮೂರನೆಯದು ದಿನಕ್ಕೆ ಎರಡು ಬಾರಿ ತುಳಸಿ, ಶುಂಠಿ ಮಿಶ್ರಿತ ಕಸಾಯ ಸೇವನೆ, ರಾತ್ರಿ ಮಲಗುವಾಗ ಒಂದು ಲೋಟ ಅರಿಶಿನ ಮಿಶ್ರಿತ ಹಾಲು ಸೇವನೆ. ನಿತ್ಯ ಒಂದು ಗಂಟೆ ವ್ಯಾಯಾಮ.

ನಮಗೆ ಸೋಂಕು ಬರಬಾರದು. ಬಂದರೂ ಯಾವುದೇ ತೊಂದರೆಯಾಗಬಾರದು ಎಂದುಕೊಳ್ಳುವವರು ಈ ಪಂಚ ಸೂತ್ರಗಳನ್ನು ಅಳಡಿಸಿಕೊಂಡರೆ ಕೊರೊನಾದಿಂದ ದೂರ ಇರಬಹುದು ಎಂಬುದು ಸ್ವಾಮೀಜಿಯ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT