ಶುಕ್ರವಾರ, ಜನವರಿ 22, 2021
20 °C
ದೇವಾಂಗ ನೇಕಾರ ಯುವ ವೇದಿಕೆಯಿಂದ ಪ್ರತಿಭಟನೆ

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹಿಂದುಳಿದಿರುವ ದೇವಾಂಗ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ದೇವಾಂಗ ನೇಕಾರ ಯುವ ವೇದಿಕೆಯಿಂದ ಶುಕ್ರವಾರ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಲಾಯಿತು.

ದೇವಾಂಗ ಸಮಾಜ ಹಿಂದುಳಿದ ಸಮುದಾಯವಾಗಿದ್ದು, ಸರ್ವತೋಮುಖ ಬೆಳವಣಿಗೆಗಾಗಿ ದೇವಾಂಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡುವ ಅಗತ್ಯವಿದೆ. ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರಾಜ್ಯದಲ್ಲಿ 20 ಲಕ್ಷ ದೇವಾಂಗ ಜನಾಂಗದವರಿದ್ದಾರೆ. ನೇಕಾರಿಕೆ ಮೂಲವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ನೇಕಾರಿಕೆ ಮುಂದುವರಿಸಿಕೊಂಡು ಹೋಗುವುದೇ ಕಷ್ಟವಾಗುತ್ತಿದೆ. ಸಮುದಾಯದ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಶಿಕ್ಷಣ, ರಾಜಕೀಯದಲ್ಲೂ ಹಿಂದೆ ಉಳಿದಿದ್ದಾರೆ. ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಮುದಾಯಕ್ಕೂ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.‌

ಜಿಲ್ಲಾ ದೇವಾಂಗ ಯುವ ವೇದಿಕೆಯ ಅಧ್ಯಕ್ಷ ಜೆ.ವೈ. ಸಚಿನ್, ಗಣೇಶ್, ವೇಣು, ಅರುಣ್, ಮಧುಕುಮಾರ್, ಅನುನಂದನ್, ಆದರ್ಶ, ವೀರಭದ್ರ, ಸಚಿನ್, ಹೇಮಂತ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು