ಬುಳ್ಳಾಪುರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿಗಾಗಿ ನಿರ್ಮಾಣಗೊಂಡಿರುವ ಪಂಪ್‌ಹೌಸ್
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ತುಂಗಾ ನದಿಗೆ ಶಿವಮೊಗ್ಗ ನಗರದ ಕೊಳಚೆ ನೀರು ಸೇರುತ್ತಿದೆ. ಇದು ಕುಡಿಯುವುದಕ್ಕೆ ಯೋಗ್ಯವಲ್ಲ
ಸಿದ್ದೇಶ್ ಕ್ಯಾತಿನಕೊಪ್ಪ ನಿವಾಸಿ
ತುಂಗಾ ಡ್ಯಾಂನಿಂದ ನೇರವಾಗಿ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡಿ ಸುತ್ತಲಿನ ಗ್ರಾಮಗಳಿಗೆ ಒದಗಿಸುವ ಕೆಲಸವಾಗಬೇಕು. ತಡೆಗೋಡೆ ನಿರ್ಮಾಣ ಮಾಡಿ ಭದ್ರಾ ನದಿ ನೀರನ್ನು ವಾಪಸ್ ತಂದರೆ ಕೃಷಿ ಚಟುವಟಿಕೆಗೆ ಸಾಕಾಗುವುದಿಲ್ಲ.
ಷಣ್ಮುಖಪ್ಪ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಿನಕೊಪ್ಪ
ಸ್ಮಶಾನ ಜಾಗದ ಕೊನೆಯ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಘಟಕ ಸ್ಥಾಪಿಸಲಾಗಿದೆ. ದುರ್ವಾಸನೆಯಿಂದಾಗಿ ನೀರನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುವುದೋ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುವುದು
ಸವಿತಾ ಪಿಡಿಒ ಬೇಡರಹೊಸಹಳ್ಳಿ ಗ್ರಾ.ಪಂ.
ತಾಂತ್ರಿಕ ತೊಂದರೆಯಿಂದಾಗಿ ಕೆಲಸ ಅಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿ ನೀರು ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು
ಶಾರದಾ ಪೂರ್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ