ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಸುಧಾರಣೆ ತಿದ್ದುಪಡಿಗೆ ದಸಂಸ ವಿರೋಧ

Last Updated 10 ಜುಲೈ 2020, 13:33 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಜ್ಯ ಸರ್ಕಾರಭೂ ಸುಧಾರಣಾ ಕಾಯ್ದೆಗೆ ತರಾತುರಿಯಲ್ಲಿತಿದ್ದುಪಡಿತಾರದೇ ವಿಧಾನಸಭೆಯಲ್ಲಿ ಚರ್ಚೆಗೆ ಒಳಪಡಿಸಬೇಕುಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಕಾರ್ಯಕರ್ತರು ಶುಕ್ರವಾರಜಿಲ್ಲಾಧಿಕಾರಿ ಕಚೇರಿ ಮುಂದೆಪ್ರತಿಭಟನೆ ನಡೆಸಿದರು.

ಭೂ ಸುಧಾರಣಾ ಕಾಯ್ದೆ ಪರಿಶಿಷ್ಟರು,ಹಿಂದುಳಿದ ವರ್ಗಗಳು, ಬಡವರು, ಭೂಹೀನರು, ಕೃಷಿ ಕಾರ್ಮಿಕರ ಪರವಾಗಿದೆ. ತಿದ್ದುಪಡಿಮೂಲಕ ಬಂಡವಾಳಶಾಹಿಗಳಿಗೆ ಮತ್ತು ಕಾರ್ಪೋರೇಟ್‌ ಕಂಪನಿಗಳಿಗೆ ರತ್ನಗಂಬಳಿ ಹಾಸುತ್ತಿದೆ ಎಂದು ಆರೋಪಿಸಿದರು.

ಅಭಿವೃದ್ದಿ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿ ಕೈಗಾರಿಕೆಗಳಿಗೆ ನೀಡಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಧೀರ್ಘಕಾಲದವರೆಗೆ ಗುತ್ತಿಗೆ ನೀಡಿದ್ದ ಜಮೀನುಗಳನ್ನೂ ರಭಾರೆ ಮಾಡಲು ಹೊರಟಿದೆ.ತಿದ್ದುಪಡಿ ನಿರ್ಧಾರಹಿಂಪಡೆಯಬೇಕು ಎಂದು ಆಗ್ರಹಿಸಿದರು.

ತಾರತಮ್ಯಮಾಡದೇ ಸಮಾನ ಭೂ ಹಂಚಿಕೆಯಾಗಬೇಕು. ವ್ಯವಸಾಯಕ್ಕೆ ಯೋಗ್ಯ ಭೂಮಿಯನ್ನು ಕೃಷಿಗಾಗಿ ಅಥವಾ ಕೃಷಿ ಚಟುವಟಿಕೆಗಳಿಗೆ ಬಳಸುವಂತೆ ಆಗಬೇಕು. ಪರಿಶಿಷ್ಟರಿಗೆ ಮೀಸಲಿಟ್ಟ ಭೂಮಿ ಪರಭಾರೆ ಮಾಡಬಾರದು.ಅವರಿಗೇ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಯ ಟಿ.ಎಚ್.ಹಾಲೇಶಪ್ಪ, ಎಂ.ಆರ್.ಶಿವಕುಮಾರ್ ಆಸ್ತಿ, ಎ.ಡಿ.ಆನಂದ್, ಬಿ.ಕೆ.ಹನುಮಂತಪ್ಪ, ಚಿಕ್ಕಲ್ ಸುರೇಶ್, ಪಳನಿರಾಜ್‌ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT