ಶಿವಮೊಗ್ಗ: ‘ಕರ್ನಾಟಕ ಏಕೀಕರಣಗೊಂಡ 70 ವರ್ಷಗಳ ನಂತರವೂ ರಾಜ್ಯಕ್ಕೆ ಸ್ಪಷ್ಟವಾದ, ಭಾಷಾ ನೀತಿ ಹಾಗೂ ಸಾಂಸ್ಕೃತಿಕ ನೀತಿ ಇಲ್ಲ. ಭಾಷೆ ಬಲಗೊಳ್ಳಲು ಅಲ್ಲಿನ ಶಿಕ್ಷಣ ನೀತಿ ತುಂಬಾ ಸಬಲವಾಗಿರಬೇಕು. ಆದರೆ, ವರ್ಷದಿಂದ ವರ್ಷಕ್ಕೆ ಶಿಕ್ಷಣ ವ್ಯವಸ್ಥೆಯ ಬೇರುಗಳನ್ನು ದುರ್ಬಲಗೊಳಿಸಲಾಗುತ್ತಿದೆ’ ಎಂದು ಹಿರಿಯ ಪತ್ರಕರ್ತ ಚ.ಹ.ರಘುನಾಥ್ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಶನಿವಾರ ಅಹರ್ನಿಶಿ ಪ್ರಕಾಶನದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲೇಖಕಿ ರಾಜಲಕ್ಷ್ಮಿ ಕೋಡಿಬೆಟ್ಟು ಅವರ ‘ಲಲಿತ ಮಂಟಪ’ ಹಾಗೂ ಜಿ.ಎನ್.ಧನಂಜಯಮೂರ್ತಿ ಅವರ ‘ರಾಗಿತೆನೆ’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸರ್ಕಾರದ ಭಾಷಾ ನೀತಿ, ಶೈಕ್ಷಣಿಕ ನೀತಿ ಗಮನಿಸಿದರೆ ಸರ್ಕಾರ ಹೊಣೆಗೇಡಿಯಂತೆ, ವಿವೇಕವಿಲ್ಲದೇ ಕ್ಷಣಿಕದ ಲಾಭಗಳಿಗೆ ಸ್ಪಂದಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ಮುಂದಾಗಿದೆ. ಆದರೆ, ಆ ಶಾಲೆಗಳು ತಮ್ಮ ಸುತ್ತಮುತ್ತಲಿನ ಅನೇಕ ಸರ್ಕಾರಿ ಶಾಲೆಗಳನ್ನು ಅಪೋಷನ ತೆಗೆದುಕೊಳ್ಳಲಿವೆ. ಅಷ್ಟರಮಟ್ಟಿಗೆ ತಾಯ್ನುಡಿ ಕ್ಷೀಣವಾಗುತ್ತಾ ಇನ್ನೊಂದು ಭಾಷೆಯ ಗರ್ಭದಲ್ಲಿ ಸೇರಿಕೊಳ್ಳುವ ಸನ್ನಿವೇಶ ಸೃಷ್ಟಿಸಲಾಗುತ್ತಿದೆ’ ಎಂದರು.

‘ಕನ್ನಡ ಶಾಲೆಗಳನ್ನು ದುರ್ಬಲಗೊಳಿಸುವ ಕೆಲಸವನ್ನು ಎಲ್ಲ ಸರ್ಕಾರಗಳು ನಿರಂತರವಾಗಿ ಮಾಡಿಕೊಂಡು ಬಂದಿವೆ. ಕನ್ನಡವನ್ನು ಒಂದು ಭಾಷೆಯನ್ನಾಗಿ ಪರಿಣಾಮಕಾರಿಯಾಗಿ ರೂಪಿಸುವ ಪ್ರಯತ್ನಗಳು ರಾಜ್ಯದಲ್ಲಿ ನಡೆದಿಲ್ಲ ಎಂಬುದು ಅವಜ್ಞೆಯೂ ಹೌದು. ಇದು ಕನ್ನಡದ ನಾಳೆಗಳನ್ನು ಮಂಕಾಗಿಸುವ ಇಲ್ಲವೇ ಕನ್ನಡದ ಭವಿಷ್ಯವನ್ನು ಅನಿಶ್ಚಿತಗೊಳಿಸುವ ಪ್ರಯತ್ನವೂ ಹೌದು’ ಎಂದು ಹೇಳಿದರು.

‘ಭಾಷಾ ನೀತಿ ಹಾಗೂ ಶೈಕ್ಷಣಿಕ ನೀತಿಯ ನಿರೂಪಣೆಯಲ್ಲಿನ ಹಿನ್ನಡೆಗೆ ಸರ್ಕಾರ ಮಾತ್ರವಲ್ಲದೇ ಸಮಾಜ ಕೂಡ ಕಾರಣವಾಗಿದೆ. ಪಾಲಕರು ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಕಳುಹಿಸುವ ಮೂಲಕ ಕನ್ನಡದ ವಿವೇಕವನ್ನು ಪ್ರಜ್ಞಾಪೂರ್ವಕ ಇಲ್ಲವೇ ಅಪ್ರಜ್ಞಾಪೂರ್ವಕವಾಗಿ ಬಿಟ್ಟುಕೊಡುತ್ತಿದ್ದೇವೆ. ಇದು ಕನ್ನಡತನಕ್ಕೆ ಎದುರಾದ ಎರಡನೇ ಆತಂಕ’ ಎಂದರು.

‘ಕನ್ನಡದ ಮಟ್ಟಿಗೆ ಭಾಷೆ ಭಾವುಕತೆಯ ಸಂಗತಿ ಮಾತ್ರ ಆಗಿದೆ. ಸಾಂಸ್ಕೃತಿಕ ಇಲ್ಲವೇ ರಾಜಕೀಯ ಪ್ರಜ್ಞೆ ಆಗಲಿಲ್ಲ. ರಾಜಕೀಯ ಪ್ರಜ್ಞೆಯಾಗಿ ರೂಪುಗೊಳ್ಳದೇ ಹೋದರೆ ಯಾವ ಭಾಷೆಯೂ ಬಲಿಷ್ಠವಾಗಲು, ವರ್ತಮಾನದ ಅಗತ್ಯಗಳನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿ ಸ್ವಲ್ಪ ಮಟ್ಟಿಗೆ ಭಾಷೆ ರಾಜಕೀಯ ಪ್ರಜ್ಞೆಯಾಗಿ ಉಳಿದುಕೊಂಡಿರುವುದರಿಂದಲೇ ಆ ಭಾಷೆಗಳು ದಕ್ಷಿಣದ ಅಸ್ಮಿತೆಯಾಗಿ ಕಾಣಿಸುತ್ತಿವೆ’ ಎಂದರು.

‘ನಾವು ಆಡುವ ಭಾಷೆ ತನ್ನ ಧ್ವನಿ ಶಕ್ತಿಯನ್ನು ಕಳೆದುಕೊಳ್ಳುವುದು ಕೂಡ ಇವತ್ತಿನ ಎಲ್ಲ ಸಂಕಟಗಳಿಗೆ ಕೇಂದ್ರವಾಗಿದೆ ಎಂಬುದು ಕನ್ನಡದ ಅಸ್ಮಿತೆಗೆ ಎದುರಾದ ಮೂರನೇ ಆತಂಕ’ ಎಂದು ಅಭಿಪ್ರಾಯಪಟ್ಟರು.

‘ಲಲಿತ ಮಂಟಪ’ ಪುಸ್ತಕದ ಬಗ್ಗೆ ಕವಿಯತ್ರಿ ಕೃತಿ ಪರಪ್ಪೆಮನೆ ಹಾಗೂ ‘ರಾಗಿತೆನೆ’ ಪುಸ್ತಕದ ಬಗ್ಗೆ ಪ್ರೊ.ಎಸ್.ಎಂ.ಮುತ್ತಯ್ಯ ಮಾತನಾಡಿದರು.

ರಾಜಲಕ್ಷ್ಮಿ ಕೋಡಿಬೆಟ್ಟು, ಕೆ.ವಿ.ಧನಂಜಯಮೂರ್ತಿ ಕೃತಿಗಳು ರೂಪುಗೊಂಡ ಹಿಂದಿನ ಸಂದರ್ಭವನ್ನು ಬಿಚ್ಚಿಟ್ಟರು. ಚಿಂತಕ ಸುಧೀರ್ಕುಮಾರ್ ಮರೋಳ್ಳಿ ಮಾತನಾಡಿದರು. ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ
ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.