ಭಾನುವಾರ, ನವೆಂಬರ್ 29, 2020
25 °C

ಸಕ್ರೆಬೈಲು ಆನೆ ಬಿಡಾರದದಲ್ಲಿ ಕಾಡಾನೆ ದಾಳಿಗೆ ‘ರಂಗ’ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಆನೆ ರಂಗ (35) ಶನಿವಾರ ಬೆಳಗಿನ ಜಾವ ಕಾಡಾನೆ ದಾಳಿಗೆ ಮೃತಪಟ್ಟಿದ್ದಾನೆ.

ನಸುಕಿನಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿದಾಗ ಸರಪಳಿಯಲ್ಲಿ ಬಂಧಿಯಾಗಿದ್ದ ರಂಗ ಅಸಹಾಯಕ ನಾಗಿದ್ದಾನೆ. ಕಾಡಾನೆಯ ದಂತ ತಿವಿತಕ್ಕೆ ರಕ್ತಸ್ರಾವದಿಂದ ಜೀವ ಬಿಟ್ಟಿದ್ದಾನೆ.

ಸಕ್ರೆಬೈಲು ಕ್ಯಾಂಪ್ ನಲ್ಲಿ ಹುಟ್ಟಿದ ರಂಗ. ಗೀತಾ ಆನೆಯ ಪುತ್ರ.

ರಾತ್ರಿ ಸಮಯದಲ್ಲಿ ಕಟ್ಟಿ ಹಾಕದಿದ್ದರೆ ರಂಗ ಬದುಕಿ ಉಳಿಯುತ್ತಿದ್ದ. ಮಾವುತರು, ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು