ಸೋಮವಾರ, ಜೂನ್ 21, 2021
20 °C

ದಂತ ವೈದ್ಯರ ಮೇಲೆ ಸುಳ್ಳು ಆರೋಪ: ವ್ಯಕ್ತಿಗೆ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದಂತ ವೈದ್ಯರ ಮೇಲೆ ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ₹ 5 ಸಾವಿರ ದಂಡ ವಿಧಿಸಿದೆ. 

ಎರಡು ವರ್ಷಗಳ ಹಿಂದೆ ಮಲ್ಲಿಕಾರ್ಜುನ ಪಾಟೀಲ್ ಎಂಬವರು ದಂತವೈದ್ಯ ಬಿ.ಪರಮೇಶ್ವರಪ್ಪ ಎಂಬುವರು ದಂತ ಚಿಕಿತ್ಸೆ ವೇಳೆ ಎರಡು ಹಲ್ಲುಗಳನ್ನು ಕಿತ್ತ ಪರಿಣಾಮ ತೀವ್ರ ರಕ್ತಸ್ರಾವವಾಗಿ ಬೇರೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿ, ಹಲ್ಲು ಕಿತ್ತಿದ್ದರಿಂದ ಈಗ ತಲೆನೋವು ಬರುತ್ತಿದೆ ಎಂದು ಆರೋಪಿಸಿ ದಂತವೈದ್ಯರ ಮೇಲೆ ಆಪಾದನೆ ಮಾಡಿದ್ದರು.

ದಾಖಲೆ ಪರಿಶೀಲಿಸಿದಾಗ ಗ್ರಾಹಕರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಬೀತಾದ ನಂತರ ಆರೋಪ ಮಾಡಿದ ವ್ಯಕ್ತಿ  ವೈದ್ಯನಿಗೆ ದಂಡ ರೂಪದಲ್ಲಿ ₹ 5 ಸಾವಿರ ಪಾವತಿಸಲು ವೇದಿಕೆ ಅಧ್ಯಕ್ಷೆ ಸಿ.ಎಂ.ಚಂಚಲ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ ಮತ್ತು ಪಿ.ವಿ.ಲಿಂಗರಾಜು ಆದೇಶ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು