ಶಿವಮೊಗ್ಗ: ಇಲ್ಲಿನ ಸಕ್ರೆಬೈಲಿನ ಆನೆ ಬಿಡಾರದಲ್ಲಿರುವ ನಾಲ್ಕು ಆನೆಗಳು ಸೇರಿ 14 ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಲು ಸಿದ್ಧತೆ ನಡೆದಿದೆ.

ಮಧ್ಯಪ್ರದೇಶದಲ್ಲಿ ಹುಲಿಗಳ ಸೆರೆ ಕಾರ್ಯಾಚರಣೆಗೆ ಆನೆಗಳ ಬಳಕೆ ಮಾಡಲು ಕರ್ನಾಟಕದಿಂದ ಅನೆಗಳನ್ನು ಕಳುಹಿಸಲು ಅಲ್ಲಿನ ಸರ್ಕಾರ ಕೋರಿದ್ದು, ಅದರನ್ವಯ 12 ಗಂಡು ಹಾಗೂ ಎರಡು ಹೆಣ್ಣು ಆನೆಗಳ ಈ ತಂಡವನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅರಣ್ಯ ಇಲಾಖೆಯಿಂದ ಆದೇಶ ಪತ್ರ ಇಲ್ಲಿನ ಆನೆ ಬಿಡಾರದ ಆಡಳಿತಕ್ಕೆ ತಲುಪಿದೆ.

ಸಕ್ರೆಬೈಲು ಆನೆ ಬಿಡಾರದಲ್ಲಿ ಇರುವ ರವಿ (25), ಶಿವಾ (06), ಮಣಿಕಂಠ (35), ಬೆಂಗಳೂರಿನ ಗಣೇಶ (36), ರಾಮಪುರದ ಬಂಡೀಪುರ ಹುಲಿ ಅಭಯಾರಣ್ಯದ ಗಣೇಶ (17), ಕೃಷ್ಣ (21), ಗಜ (07), ಮರ್ಸಿಹಾ (07), ಪೂಜಾ (09), ಮಡಿಕೇರಿಯಲ್ಲಿರುವ ದುಬಾರೆ ಆನೆ ಬಿಡಾರದಿಂದ ಜನರಲ್ ತಿಮ್ಮಯ್ಯ (08), ಜನರಲ್ ಕಾರಿಯಪ್ಪ (08), ವಲ್ಲಿ (40), ಲವ (21) ಹಾಗೂ ಮಾರುತಿ (20) ಆನೆಗಳು ಮಧ್ಯಪ್ರದೇಶಕ್ಕೆ ತೆರಳಲಿವೆ.

ಮಧ್ಯಪ್ರದೇಶದಿಂದ ಬಂದಿದ್ದ ಅರಣ್ಯಾಧಿಕಾರಿ ಹಾಗೂ ವೈದ್ಯಾಧಿಕಾರಿ ತಂಡ ರಾಜ್ಯದ ಆನೆ ಬಿಡಾರದ ಆನೆಗಳ ಆರೋಗ್ಯ ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಬಹುದಾದ ಸಾಧ್ಯತೆ ಪರಿಶೀಲಿಸಿ ಆನೆಗಳ ಪಟ್ಟಿ ಕೊಟ್ಟಿದ್ದರು.

ಮೂರನೇ ಬಾರಿ ಪಯಣ: ತಿಂಗಳ ಹಿಂದಷ್ಟೇ (ನವೆಂಬರ್ 2) ಸಕ್ರೆಬೈಲು ಆನೆ ಬಿಡಾರದಲ್ಲಿದ್ದ 12 ವರ್ಷದ ಸೂರ್ಯ ಸೇರಿ ರಾಮಾಪುರ, ತಿತಿಮತಿಯ ಆನೆಯ ಶಿಬಿರದ ನಾಲ್ಕು ಆನೆಗಳನ್ನು ಉತ್ತರಪ್ರದೇಶದ ಪಿಲಿಬಿಟ್ನ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಕಳುಹಿಸಿಕೊಡಲಾಗಿತ್ತು. 2017ರಲ್ಲೂ 10 ಆನೆಗಳನ್ನು ರಾಜ್ಯದಿಂದ ಉತ್ತರ ಪ್ರದೇಶದದೂದ್ವಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಈಗ ಮೂರನೇ ಬಾರಿ ದೊಡ್ಡ ತಂಡ ಅಲ್ಲಿಗೆ ಹೊರಟಿದೆ.

ಹೊಸ ಸದಸ್ಯನ ಸೇರ್ಪಡೆ: ಐದು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿ ಸೆರೆಹಿಡಿಯಲಾದ 12 ವರ್ಷದ ಸಲಗವನ್ನು ಸಕ್ರೆಬೈಲಿಗೆ ಕಳುಹಿಸಲಾಗಿದೆ. ಅದನ್ನು ಪಳಗಿಸುವ ಕಾರ್ಯ ನಡೆದಿದೆ.

ಕುಂತಿಗೆ 4ನೇ ಬಾರಿ ತಾಯ್ತನದ ಸಂಭ್ರಮ..

ಸಕ್ರೆಬೈಲಿನ ಆನೆ ಕ್ಯಾಂಪಿನಲ್ಲಿರುವ 40 ವರ್ಷದ ಆನೆ ಕುಂತಿಗೆ ಈಗ ನಾಲ್ಕನೇ ಬಾರಿಗೆ ತಾಯ್ತನದ ಸಂಭ್ರಮ.

‘ತಿಂಗಳ ಒಳಗೆ ಕುಂತಿ ಮರಿ ಹಾಕುವ ನಿರೀಕ್ಷೆ ಇದೆ. ಹೀಗಾಗಿ ವಿಶೇಷ ನಿಗಾದಲ್ಲಿ ಇಟ್ಟಿದ್ದೇವೆ’ ಎಂದು ಆನೆ ಬಿಡಾರದ ಮುಖ್ಯವೈದ್ಯ ಡಾ.ವಿನಯ್ ತಿಳಿಸಿದ್ದಾರೆ.

ಕುಂತಿಗೆ 21 ತಿಂಗಳು ತುಂಬಿದ್ದು, ತುಂಬು ಗರ್ಭಿಣಿ. ಹೀಗಾಗಿ ಆಕೆಯನ್ನು ಉಳಿದ ಎರಡು ಹೆಣ್ಣಾನೆಗಳಾದ ನೇತ್ರಾವತಿ, ಭಾನುಮತಿಯೊಂದಿಗೆ ಕಾಡಿಗೆ ಬಿಡಲಾಗುತ್ತಿದೆ. ಆನೆಗಳು ಸಾಮಾನ್ಯವಾಗಿ ಮಧ್ಯರಾತ್ರಿ ಇಲ್ಲವೇ ನಸುಕಿನಲ್ಲಿ ಮರಿ ಹಾಕುತ್ತವೆ. ಹೆರಿಗೆಗೆ ದಟ್ಟ ಅರಣ್ಯದಲ್ಲಿ ಸುರಕ್ಷಿತ ಜಾಗವನ್ನು (ಪೊದೆ) ಕುಂತಿಯೇ ಆಯ್ಕೆ ಮಾಡಿಕೊಳ್ಳುತ್ತಾಳೆ. ಹೆರಿಗೆ ವೇಳೆ ಜೊತೆಯಲ್ಲಿರುವ ಹೆಣ್ಣಾನೆಗಳುಅಕ್ಷರಶಃ ಸೂಲಗಿತ್ತಿಯರಂತೆ ನೆರವಿಗೆ ನಿಲ್ಲುತ್ತವೆ. ಈ ಸ್ವಭಾವ ಪ್ರಕೃತಿದತ್ತವಾಗಿಯೇ ಆನೆಗಳಿಗೆ ಬಂದಿರುತ್ತದೆ‘ ಎಂದು ಅವರು ವಿವರಿಸಿದರು.

‘ಕುಂತಿ ಮರಿ ಹಾಕುತ್ತಿದ್ದಂತೆಯೇ ಎರಡು ಹೆಣ್ಣಾನೆಗಳು ಜೋರಾಗಿ ಕೂಗಿಕೊಳ್ಳುತ್ತವೆ. ಅದು ನಮಗೆ ಸೂಚನೆ. ನಂತರ ನಮ್ಮ ಮಾವುತರು, ಕಾವಾಡಿಗಳೊಂದಿಗೆ ಸ್ಥಳಕ್ಕೆ ತೆರಳಿ ನೆರವು ನೀಡಲಾಗುವುದು. ಒಂದು ದಿನ ಕಾಡಿನಲ್ಲಿಯೇ ಇದ್ದು, ತಾಯಿ–ಮರಿಯನ್ನು ಸಂರಕ್ಷಿಸಿ ನಂತರ ಬಾಣಂತನಕ್ಕೆ ಕ್ಯಾಂಪ್ಗೆ ಕರೆ ತರುತ್ತೇವೆ’ ಎಂದು ಡಾ.ವಿನಯ್ ತಿಳಿಸಿದರು.

2014ರಲ್ಲಿ ಸಕಲೇಶಪುರದಲ್ಲಿ ಕುಂತಿಯನ್ನು ಸೆರೆಹಿಡಿದು ಸಕ್ರೆಬೈಲಿಗೆ ತರಲಾಗಿದೆ.

ಕೋಟ್...

ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಈ ಆನೆಗಳನ್ನು ಕಳುಹಿಸಲಾಗುತ್ತಿದೆ. ಮಧ್ಯಪ್ರದೇಶದ ಪರಿಸರಕ್ಕೂ ಹೊಂದಿಕೊಳ್ಳಲಿವೆ. ಶೀಘ್ರ ಆನೆಗಳ ತಂಡ ಸಕ್ರೆಬೈಲಿನಿಂದ ಪ್ರಯಾಣ ಬೆಳೆಸಲಿವೆ.

ಬಿ. ಸುರೇಶ್, ಎಸಿಎಫ್, ವನ್ಯಜೀವಿ ವಿಭಾಗ, ಶಿವಮೊಗ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.