ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗಕ್ಕೆ ಗೀತಾ, ಶಿವರಾಜಕುಮಾರ್ ಮಾರ್ಚ್ 20ಕ್ಕೆ

ಪ್ರಚಾರಕ್ಕೆ ಅಂದು ವಿದ್ಯುಕ್ತ ಚಾಲನೆ, 400 ಕಡೆ ಸಭೆ: ಮಧು ಬಂಗಾರಪ್ಪ
Published 15 ಮಾರ್ಚ್ 2024, 15:30 IST
Last Updated 15 ಮಾರ್ಚ್ 2024, 15:30 IST
ಅಕ್ಷರ ಗಾತ್ರ

ಶಿವಮೊಗ್ಗ: ಗೀತಾ ಶಿವರಾಜ್‌ಕುಮಾರ್ ಮತ್ತು ಶಿವರಾಜ್‌ಕುಮಾರ್ ಮಾರ್ಚ್ 20ರಂದು ಶಿವಮೊಗ್ಗಕ್ಕೆ ಬರಲಿದ್ದು, ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಶಿವಮೊಗ್ಗದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಗೀತಾ ಜೊತೆಗೆ ಶಿವರಾಜ್‌ಕುಮಾರ್ ಕೂಡ ಬರುತ್ತಾರೆ. ತಾಲ್ಲೂಕು ಮಟ್ಟದ ಸಭೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಬರಲಿದ್ದಾರೆ. ಹೋಬಳಿ ಮಟ್ಟದಲ್ಲಿ ಶಿವರಾಜಕುಮಾರ್ ಪ್ರಚಾರ ನಡೆಸಲಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಹೀಗಾಗಿ ಗ್ಯಾರಂಟಿ ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲಿದ್ದೇವೆ. ಜನರಿಗೆ ಈಗಾಗಲೇ ನಮ್ಮ ಸರ್ಕಾರದ ಮೇಲೆ ವಿಶ್ವಾಸ, ಪ್ರೀತಿ ಬಂದಿದೆ. ಈ ಬಾರಿ ನಾವು ಗೆದ್ದೆಗೆಲ್ಲುತ್ತೇವೆ. ಬಿಜೆಪಿಯವರು ಪ್ರಚಾರ ತೆಗೆದುಕೊಳ್ಳುತ್ತಾರೆ. ಆದರೆ ನಾವು ತೆಗೆದುಕೊಳ್ಳುತ್ತಿಲ್ಲ ಅಷ್ಟೇ ಎಂದರು.

ಕಾಂಗ್ರೆಸ್  ಅಭ್ಯರ್ಥಿ ಗೀತಾಶಿವರಾಜ್ ಕುಮಾರ್ ಬಹಳ ಕ್ರಿಯಾಶೀಲವಾಗಿ ಕೆಲಸ ಮಾಡಲಿದ್ದಾರೆ. ಸಂಸದರಾಗಿಯೂ ಅವರ ಜವಾಬ್ದಾರಿ ನಿರ್ವಹಿಸುತ್ತಾರೆ. ಜಿಲ್ಲೆಯ ಧ್ವನಿಯಾಗಲಿದ್ದಾರೆ ಎಂದರು.
ಮಾರ್ಚ್ 17 ರಂದು ಚುನಾವಣೆ ಪೂರ್ವಭಾವಿ ಸಭೆ ಮಾಡಲಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಶಿವರಾಜಕುಮಾರ್ ಪ್ರಚಾರ ಮಾಡುವ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಗೀತಾ ಶಿವರಾಜ್ ಕುಮಾರ್ 400 ಸಭೆ ಮಾಡಲಿದ್ದಾರೆ ಎಂದರು.

ಇದಕ್ಕೂ ಮೊದಲು ಸಚಿವರು ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಚ್.ಎಸ್. ಸುಂದರೇಶ್, ಎನ್‌.ರಮೇಶ್‌, ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್, ಚಂದ್ರಭೂಪಾಲ್, ಕಲೀಂ ಪಾಶಾ, ಇಕ್ಕೇರಿ ರಮೇಶ್, ಎನ್.ಡಿ.ಪ್ರವೀಣ್‌ಕುಮಾರ್, ಜಿ.ಪದ್ಮನಾಭ್, ಶಿ.ಜು.ಪಾಶ, ಪಿ.ಎಸ್.ಗಿರೀಶ್‌ರಾವ್, ಎಂ.ಟಿ. ದಿನೇಶ್ ಪಾಟೀಲ್, ವೈ.ಹೆಚ್.ನಾಗರಾಜ್ ಸೇರಿದಂತೆ ಹಲವರಿದ್ದರು.

‘ಶಿವಮೊಗ್ಗಕ್ಕೆ ಬಿವೈಆರ್ ಕೊಡುಗೆ ಏನು’

ಶಿವಮೊಗ್ಗ: ಲೋಕಸಭಾ ಸದಸ್ಯರಾಗಿ 10 ವರ್ಷ ಇದ್ದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಜಿಲ್ಲೆಗೆ ಹೇಳುವಂತ ಕೊಡುಗೆಗಳ ಕೊಟ್ಟಿಲ್ಲ. ಮನಮೋಹನ್‌ ಸಿಂಗ್ ಪ್ರಧಾನಿ ಆಗಿದ್ದಾಗ ದುಡ್ಡು ಕೊಟ್ಟಿದ್ದ ಮೇಲ್ಸೇತುವೆಗಳನ್ನು (ಫ್ಲೈಓವರ್‌) ಈಗ ಮುಗಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ ಟೀಕಿಸಿದರು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಅಡಿಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ರಾಘವೇಂದ್ರ ಸಂಸತ್‌ನಲ್ಲಿ ಧ್ವನಿ ಎತ್ತಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ 15 ದಿನದೊಳಗೆ ಬಗೆಹರಿಸುತ್ತೇನೆ ಎಂದು ಹೇಳಿ ವರ್ಷಗಳಾದರೂ ಪರಿಹರಿಲಸಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದಿಂದ ಯಾವ ನೆರವು ತರಲಿಲ್ಲ ಎಂದು ಆರೋಪಿಸಿದರು. ಗೀತಾ ಶಿವರಾಜ್‌ ಕುಮಾರ್‌ ಅವರ ಗೆಲುವು ಖಚಿತ. ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುತ್ತಿದ್ದೇವೆ. ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಜನಪ್ರತಿನಿಧಿಗಳು ಸಂಕಲ್ಪ ತೊಟ್ಟಿದ್ದಾರೆ ಎಂದರು. ಗೀತಾ ಇನ್ನೂ ಶಿವಮೊಗ್ಗಕ್ಕೆ ಬಂದಿಲ್ಲ ಎಂದು ಹಲವರು ಹೇಳುತ್ತಾರೆ. ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಕಡೆ ಜಾತ್ರೆಗಳು ಮುಗಿಯಲಿ ಎಂದು ಕಾಯುತ್ತಿದ್ದಾರೆ ಅಷ್ಟೇ. ಈಗಾಗಲೇ ಅವರು ಸೊರಬದಲ್ಲಿ ಇದ್ದಾರೆ. ಪ್ರಚಾರ ಕೂಡ ಕೈಗೊಂಡಿದ್ದಾರೆ. ಅವರ ಸಹೋದರ  ಮಧುಬಂಗಾರಪ್ಪ ಕೂಡ ಚುನಾವಣೆಯ ಕೆಲಸ ಮಾಡುತ್ತಿದ್ದಾರೆ  ಎಂದರು. ಪ್ರಧಾನಿ ನರೇಂದ್ರ ಮೋದಿಯ ಅಲೆ ಎಂಬುದೆಲ್ಲಾ ಸುಳ್ಳು. ಮೋದಿಯೇ ದೇವರು ಎಂದು ಬಿಜೆಪಿಯವರು ಹೇಳುತ್ತಾ ಬಂದಿದ್ದಾರೆ. ರಾಜ್ಯ ಬಿಜೆಪಿಯ ಸ್ಥಿತಿ ಹೇಳತೀರದಾಗಿದೆ. ಭಿನ್ನಮತ ತಲೆಎತ್ತಿದೆ. ಹತ್ತು ಬಾಗಿಲುಗಳು ತೆರೆದಿವೆ. ಸುಳ್ಳು ಭರವಸೆಗಳೆ ಹೆಚ್ಚಾಗುತ್ತಿವೆ. ನಮ್ಮ ಗ್ಯಾರಂಟಿಗೂ ಮೋದಿಯವರ ಗ್ಯಾರಂಟಿಗೂ ವ್ಯತ್ಯಾಸವಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT