ಸೋಮವಾರ, ಮೇ 17, 2021
21 °C
ಹೊಸನಗರ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ

ಮಾಜಿ ಶಾಸಕ ಸ್ವಾಮಿರಾವ್‌ ಪುತ್ರ ಎರಡು ಕಡೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿಯ ಎರಡು ಕ್ಷೇತ್ರಗಳಲ್ಲಿ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ ಪುತ್ರ ಸುಬ್ರಹ್ಮಣ್ಯ ರಾವ್ ಸ್ಪರ್ಧಿಸಿದ್ದಾರೆ.

ಎಂಟು ಸದಸ್ಯರನ್ನು ಹೊಂದಿರುವ ಸೊನಲೆ ಗ್ರಾಮ ಪಂಚಾಯಿತಿಯ ಸೊನಲೆ ಮತ್ತು ವಾರಂಬಳ್ಳಿ ಕ್ಷೇತ್ರಗಳಿಂದ ಸಾಮಾನ್ಯ ವರ್ಗದಲ್ಲಿ ಸುಬ್ರಹ್ಮಣ್ಯ ರಾವ್ ಅವರು ಸ್ಪರ್ಧಿಸಿರುವುದು ಗಮನ ಸೆಳೆದಿದೆ.

ಸುಬ್ರಹ್ಮಣ್ಯ ರಾವ್ ಎರಡು ಕಡೆ ಸ್ಪರ್ಧೆ ಮಾಡಿರುವ ವಿಚಾರವಾಗಿ ಗ್ರಾಮದಲ್ಲಿ ಅಪಸ್ವರ ಕೇಳಿಬಂದಿದೆ. ಹೆಚ್ಚುವರಿಯಾಗಿ ಸ್ಪರ್ಧಿಸುವುದಕ್ಕಿಂತ ಇತರೆಯವರಿಗೆ ಅವಕಾಶ ಮಾಡಿಕೊಡಬಹುದಿತ್ತು. ಎರಡೂ ಕಡೆ ಗೆದ್ದು ಬಂದಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತೆ ಚುನಾವಣೆ ನಡೆದು ನೂತನ ಸದಸ್ಯರ ಆಯ್ಕೆಯಾಗಬೇಕು. ಇದರಿಂದ ಅನಗತ್ಯ ವೆಚ್ಚವಾಗಲಿದೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸುಬ್ರಹ್ಮಣ್ಯ ರಾವ್ ಎರಡು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಅಲ್ಲದೇ ಸೊನಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು