ಶನಿವಾರ, ಮೇ 15, 2021
24 °C

ಹೆಗ್ಗೋಡಿನ ನೀನಾಸಂ ಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ ಸುಬ್ಬಣ್ಣ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಪತ್ನಿ ಶೈಲಜಾ (85) ಭಾನುವಾರ ಮುಂಡಿಗೆಸರ ಗ್ರಾಮದ ತಮ್ಮ ನಿವಾಸದಲ್ಲಿ ನಿಧನರಾದರು.

ರಂಗಕರ್ಮಿ ಕೆ.ವಿ ಅಕ್ಷರ ಅವರ ಪುತ್ರ. ಕೆ.ವಿ.ಸುಬ್ಬಣ್ಣ ಅವರು ನೀನಾಸಂ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾಗ ಮನೆ ತೋಟದ ಜವಾಬ್ದಾರಿಗಳನ್ನು ಶೈಲಜಾ ಅವರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಸುಬ್ಬಣ್ಣ ಅವರು ನೀನಾಸಂನಲ್ಲಿ ಹೆಚ್ಚು ಕಾಲ ತೊಡಗಿಸಿಕೊಳ್ಳುವಂತಾಗಿತ್ತು.

ನೀನಾಸಂ ಅಂಗಳಕ್ಕೆ ಕಾಲಿಟ್ಟಾಕ್ಷಣ ನಗುಮೊಗದಿಂದ, ಪ್ರೀತಿಯಿಂದ ಬಂದವರೆಲ್ಲರಿಗೂ ಆಪ್ತವಾಗಿ ಮಾತಾಡಿಸುತ್ತಿದ್ದ ಹಿರಿಯ ಜೀವ.
ಎಲ್ಲರ ಬಾಯಿಯಲ್ಲೂ ನೆಚ್ಚಿನ ‘ಅಮ್ಮ’ಎಂದೇ ಹೆಸರಾಗಿದ್ದರು.

ಸಂಸ್ಥೆಯ ಬೆಳವಣಿಗೆಯಲ್ಲಿ ಶೈಲಜಾ ಅವರ ಪಾತ್ರ, ಕೊಡುಗೆ ಹಿರಿದು. ಮೃತರ ಅಂತ್ಯಕ್ರಿಯೆ ಹೆಗ್ಗೋಡಿನಲ್ಲಿ ಭಾನುವಾರ ನೆರವೇರಿತು.

ಇವನ್ನೂ ಓದಿ...

ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಕಾರಣವಾದ ಮೋದಿ ಭೇಟಿ: ಈವರೆಗೆ 10 ಸಾವು

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಬೆಂಬಲಿಗರಿಂದ ಡಿಕೆಶಿ ಕಾರಿನ ಮೇಲೆ ಚಪ್ಪಲಿ ಎಸೆತ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು