ರಿಪ್ಪನ್ಪೇಟೆ: ‘ಧರ್ಮಸ್ಥಳ ಹಾಗೂ ಡಿ.ವೀರೇಂದ್ರ ಹೆಗ್ಗಡೆ ಅವರ ಮೇಲೆ ನಿರಂತರ ದೋಷಾರೋಪ ಮಾಡುವ ಮೂಲಕ ವಿಕೃತ ಸಂತೋಷ ಅನುಭವಿಸುತ್ತಿರುವ ಸಮಾಜಘಾತುಕ ಶಕ್ತಿಗಳ ಮೇಲೆ ಸರ್ಕಾರ ಮತ್ತು ನ್ಯಾಯಾಲಯವು ಕಠಿಣ ಕ್ರಮ ಜರುಗಿಸಬೇಕು’ ಎಂದು ಹೊಂಬುಜ ಜೈನ ಮಠದ ಪೀಠಾಧಿಕಾರಿ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾ ಚಾರ್ಯವರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ.

‘ಶ್ರದ್ಧಾ ಕೇಂದ್ರಕ್ಕೆ ಮಾನಹಾನಿ ಮಾಡುವ ಕೆಲಸಕ್ಕೆ ಕೆಲವರು ಕೈ ಹಾಕಿದ್ದಾರೆ. ಸರ್ಕಾರವೇ ತನಿಖಾ ಸಂಸ್ಥೆಗಳ ಮೂಲಕ ವಿಚಾರಣೆಗೆ ಮುಂದಾಗಿದೆ. ಅನಾಮಿಕ ವ್ಯಕ್ತಿಯ ಮಾತನ್ನು ಕೇಳಿಕೊಂಡು ಎಸ್ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ತನಿಖಾ ವರದಿ ಬರುವ ಮುಂಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತ ಸಮಾಜದ ದಿಕ್ಕು ತಪ್ಪಿಸುತ್ತಿದ್ದಾರೆ. ಧರ್ಮ ಮತ್ತು ಧರ್ಮಾತ್ಮರ ನಿಂದನೆ ಮಾಡುತ್ತ ಭಕ್ತರ ಮನಸ್ಸಿಗೆ ಘಾಸಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲಿ. ಕಾನೂನಿನ ಮತ್ತು ಸತ್ಯವಂತರ, ಧರ್ಮಾತ್ಮರ ಪರವಾಗಿ ಸಜ್ಜನರ ಜೊತೆ ಇದ್ದೇವೆ. ಕಾನೂನಿಗೆ ತಲೆಬಾಗಿ ತಾಳ್ಮೆಯಿಂದಿರುವ ಜನರ ಪರೀಕ್ಷೆ ಸಲ್ಲದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.