ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಣ ಕಲಾವಿದರಿಗೆ ಸನ್ಮಾನ

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗಿ
Last Updated 15 ಫೆಬ್ರುವರಿ 2021, 7:04 IST
ಅಕ್ಷರ ಗಾತ್ರ

ಶಿವಮೊಗ್ಗ: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸ್ತಬ್ಧಚಿತ್ರದೊಂದಿಗೆ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಕಲಾವಿದರಿಗೆ ಶನಿವಾರ ವಾರ್ತಾ ಇಲಾಖೆಯಿಂದ ಸನ್ಮಾನಿಸಲಾಯಿತು.

ರಂಗಾಯಣದಲ್ಲಿ ಶನಿವಾರ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಕಲಾವಿದರನ್ನು ಸನ್ಮಾನಿಸಿದವಾರ್ತಾ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ, ‘ಗಣರಾಜ್ಯೋತ್ಸವದಂತಹ ಕಾರ್ಯ
ಕ್ರಮದಲ್ಲಿ ನೇರವಾಗಿ ಭಾಗಿಯಾಗಲು ಅವಕಾಶ ದೊರೆಯುವುದು ಅಪರೂಪ. ಶಿವಮೊಗ್ಗ ರಂಗಾಯಣದ ಕಲಾವಿದರು ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡು ನಾಡಿಗೆ ಹೆಸರು ತಂದಿದ್ದಾರೆ’ ಎಂದು ಹೇಳಿದರು.

ರಂಗಾಯಣದ ನಿರ್ದೇಶಕ ಸಂದೇಶ ಜವಳಿ, ‘ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸುವುದು ಪ್ರತಿಯೊಬ್ಬರ ಕನಸು. ಈ ಬಾರಿ ನಮ್ಮ ರಂಗಾಯಣದ ಕಲಾವಿದರು ಭಾಗವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ’ ಎಂದರು.

ಪೆರೇಡ್‌ನಲ್ಲಿ ಭಾಗವಹಿಸಿದ್ದ ರಂಗಾಯಣದ ಕಲಾವಿದರಾದ ಕಾರ್ತಿಕ್ ಕಲ್ಲುಕುಟಿಕರ್, ನಿತಿನ್, ಮಹಾಬಲೇಶ್ವರ, ರಮ್ಯ ಆರ್‌., ರಂಜಿತಾ, ಸವಿತಾ ಆರ್. ಕಾಳಿ, ದೀಪ್ತಿ, ಸುಜಿತ್, ಪ್ರಸನ್ನಕುಮಾರ್, ಚಂದನ್, ರವಿಕುಮಾರ್ ಮತ್ತು ಶರತ್‌ಬಾಬು ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಅಭಿನಂದನೆ
ಸಲ್ಲಿಸಲಾಯಿತು.

ಶಿವಮೊಗ್ಗ ರಂಗಾಯಣ ಕಲಾವಿದರು ಅಭಿನಯಿಸಿರುವ ‘ಹಕ್ಕಿಕಥೆ’ ನಾಟಕದ ವಿಶೇಷ ಪ್ರದರ್ಶನ ನಡೆಯಿತು.

ರಂಗಾಯಣ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ಸ್ವಾಗತಿಸಿದರು. ರಂಗ ಸಮಾಜ ಸದಸ್ಯ ಎಸ್‌.ಆರ್. ಹಾಲಸ್ವಾಮಿ, ರಂಗನಿರ್ದೇಶಕ ಶ್ರೀಪಾದ ಭಟ್, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT