ತೀರ್ಥಹಳ್ಳಿ: ಯುನೆಸ್ಕೋ ಗುರುತಿಸಿರುವ ವಿಶ್ವ ಪರಂಪರೆಯ ಪಶ್ಚಿಮಘಟ್ಟ ಸಾಲಿನ ತಾಲ್ಲೂಕಿನ ಮೇಲಿನಕುರುವಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ.

ಮರಳು ಅಕ್ರಮ ವಹಿವಾಟಿನ ನಡುವೆ ಸದ್ದಿಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮಲೆನಾಡಿನ ಸಹಜ ಸೊಬಗಿಗೆ ಕಳಂಕ ತಂದೊಡ್ಡಿದೆ. ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟಬೇಕು ಎಂಬುದು ಸ್ಥಳೀಯರ ಒತ್ತಾಯ.

ರಾಷ್ಟ್ರಕವಿ ಕುವೆಂಪು ಜೈವಿಕ ಅರಣ್ಯಧಾಮ, ತುಂಗಾ ನದಿ ಸಮೀಪದ ಕುರುವಳ್ಳಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದೆ. ಜಿಲೆಟಿನ್ ಸ್ಫೋಟಕ ಸಾಮಗ್ರಿ ಬಳಸಿ ಬಂಡೆಸ್ಫೋಟಿಸುವ ಕೃತ್ಯ ಹೆಚ್ಚಿದ್ದು, ಪರಿಸರದ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮ ಬೀರುತ್ತಿದೆ.

‘ಗಣಿಗಾರಿಕೆ ಸಮೀಪ ರಾಷ್ಟ್ರೀಯ ಹೆದ್ದಾರಿ 169 ಮಾರ್ಗವೂ ಇದೆ. ಬೃಹತ್ ಬಂಡೆ ಮೇಲಿನ ಮಣ್ಣನ್ನು ಜೆಸಿಬಿ ಯಂತ್ರ ಬಳಸಿ ತೆಗೆದು ಬಂಡೆ ಸ್ಫೋಟಿಸಲಾಗುತ್ತಿದೆ. ಪರವಾನಗಿ ಪಡೆಯದೇ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಮಣ್ಣು ತೆಗೆದ ಭಾಗದಲ್ಲಿ ಬೃಹತ್ ಗಾತ್ರದ ಕಂದಕ ಸೃಷ್ಟಿಯಾಗಿದೆ. ಅಕ್ರಮ ಗಣಿಗಾರಿಕೆಯಿಂದ ಭೂ ಕುಸಿತ ಉಂಟಾಗುವ ಭೀತಿ ಎದುರಾಗಿದೆ’ ಎಂದು ದೂರುತ್ತಾರೆ ಸ್ಥಳೀಯರಾದ ವಿನಯ್ ಕುಮಾರ್.

ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಆಡಳಿತ ಇದುವರೆಗೂ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ. ಬೆಳಗಿನ ಹೊತ್ತಲ್ಲಿ ಜಿಲೆಟಿನ್ ಬಳಸಿ ಬಂಡೆ ಸ್ಫೋಟಿಸುವುದರಿಂದ→ಪ್ರಾಣಿ–ಪಕ್ಷಿಗಳ ಜೀವಕ್ಕೆ ಅಪಾಯ ಎದುರಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಮತ್ತು ಪರಿಸರ, ಜೀವಿಶಾಸ್ತ್ರ ಇಲಾಖೆಯ ನಿಯಮಗಳನ್ನು ಪರಿಗಣಿಸದೇ ಕಲ್ಲುಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಆರೋಪಿಸುತ್ತಾರೆ ದೇವೇಂದ್ರಪ್ಪ.

ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ. 38, 75, ಬುಕ್ಲಾಪುರ ಗ್ರಾಮ ಸರ್ವೆ ನಂ. 64ರಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರತಿ ವರ್ಷ ಸರ್ಕಾರದ ಖಜಾನೆಗೆ ಕೋಟ್ಯಂತರ ಹಣ ನಷ್ಟವಾಗುತ್ತಿದೆ. ಮೇಲಿನಕುರುವಳ್ಳಿ ಗ್ರಾಮದ ಸರ್ವೆ ನಂ. 75ರಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದ ಪ್ರದೇಶದಲ್ಲಿಯೂ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ದೂರುತ್ತಾರೆ ವಿನಯ್.

ಇಲ್ಲಿನ ಬಿಳಿ ಮತ್ತು ಕಪ್ಪು ಮಿಶ್ರಿತ ಕಲ್ಲಿಗೆ ರಾಜ್ಯದಾದ್ಯಂತ ಉತ್ತಮ ಬೇಡಿಕೆ ಇದೆ. ರಾಯಲ್ಟಿ ಬಿಲ್, ತೂಕದ ಮಾನದಂಡವಿಲ್ಲದೇ ಲಕ್ಷಾಂತರ ಮೌಲ್ಯದ ಕಲ್ಲು ಮಾರಾಟವಾಗುತ್ತಿದೆ. 1 ಟನ್ ಕಲ್ಲು ಸಾಗಣೆಗೆ ಇಲಾಖೆ ಕೇವಲ₹ 60 ಪಡೆಯುತ್ತಿದೆ. ಸಾರಿಗೆ ನಿಯಮದ ಪ್ರಕಾರ 1 ಲಾರಿಗೆ 10 ಟನ್ ಕಲ್ಲು ಸಾಮಗ್ರಿ ತುಂಬಿಸಿ ಸಾಗಿಸಲು ಅವಕಾಶವಿದೆ. ಕಟ್ಟಡಕ್ಕೆ ಬಳಸುವ ಕಲ್ಲು, ಬೇಲಿ ಕಂಬ, ಚಪ್ಪಡಿ ಸೇರಿ ವಿವಿಧ ಕಾಮಗಾರಿಗೆ ಬಳಕೆಯಾಗುವ ಕಲ್ಲು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಸರ್ಕಾರಕ್ಕೆಕೇವಲ ₹ 600 ಮಾತ್ರ ಸಂದಾಯವಾಗುತ್ತಿದೆ. ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ವರ್ಷಕ್ಕೆ₹ 100 ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿದ್ದು, ಅಕ್ರಮ ಎಸಗುವ ಅನೇಕರನ್ನು ಕುಬೇರರನ್ನಾಗಿಸಿದೆ.ಆದರೆ ಚಿಲ್ಲರೆ ರಾಜಧನ ಹೆಸರಿಗೆ ಮಾತ್ರ ಇಲಾಖೆಗೆ ಸಲ್ಲಿಕೆಯಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ತೀರ್ಥಹಳ್ಳಿಗೆ ಅಪ್ಪಳಿಸುತ್ತಿರುವ ಸ್ಫೋಟಕದ ಸದ್ದು

ಜಿಲೆಟಿನ್ ಸ್ಫೋಟದಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗುತ್ತಿದೆ.ಕುವೆಂಪು ಜೈವಿಕ ಅರಣ್ಯ ಪ್ರದೇಶ, ಸಿಬ್ಬಲಗುಡ್ಡೆ ಮತ್ಸ್ಯಧಾಮ, ತುಂಗಾ ನದಿ, ರಾಷ್ಟ್ರೀಯ ಹೆದ್ದಾರಿ ಮಾರ್ಗದ ಸುತ್ತಲಿನ 10ಕ್ಕೂ ಹೆಚ್ಚಿನ ಪುರಾತನ ದೇವಸ್ಥಾನ, ಸರ್ಕಾರಿ ಶಾಲೆ, ಶ್ರೀ ರಾಮೇಶ್ವರ ದೇವಸ್ಥಾನ, ಪುರಾಣ ಪ್ರಸಿದ್ಧ ತುಂಗಾ ನದಿಯಲ್ಲಿನ ಶ್ರೀರಾಮ ಮಂಟಪ, ನೂರು ವರ್ಷಕ್ಕೂ ಹೆಚ್ಚಿನ ಕಮಾನು ಸೇತುವೆಗಳು ಹಾಳಾಗುವ ಭೀತಿ ಎದುರಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸ್ಥಳೀಯರು ಬೇಲಿ ಕಂಬ, ಸೈಜುಗಲ್ಲು ಸಾಮಗ್ರಿಯನ್ನು ದುಬಾರಿ ಬೆಲೆಗೆ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

- ದೇವೇಂದ್ರಪ್ಪ, ಸ್ಥಳೀಯರು

ಗಣಿಗಾರಿಕೆ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಸ್ಫೋಟಕ ಬಳಸುತ್ತಿರುವ ದೂರಿಗೆ ಸಂಬಂಧಿಸಿದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಅಕ್ರಮ ತಡೆಗಟ್ಟಲು ಕ್ರಮ ತೆಗದುಕೊಳ್ಳಲಾಗುವುದು.

- ಕೆ.ಎಂ.ಶಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.