ಶಿಕಾರಿಪುರ: ಕರ್ನಾಟಕ ರಾಜ್ಯ ಪೌರಸೇವಾ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಪುರಸಭೆ ಎದುರು ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಸೇವಾ ನ್ಯೂನ್ಯತೆ ಆದಾಗ ಸರ್ಕಾರಿ ನೌಕರರ ನಿಯಮದಂತೆ ನಮಗೆ ಶಿಕ್ಷೆ ವಿಧಿಸಲಾಗುತ್ತದೆ. ಆದರೆ, ಸೌಲಭ್ಯ ನೀಡುವಾಗ ಪೌರ ನೌಕರರು ಎನ್ನುವ ತಾರತಮ್ಯ ಮಾಡಲಾಗುತ್ತದೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಜೂ. 2ರಿಂದ ನೀರು ಸರಬರಾಜು, ಸ್ವಚ್ಛತೆ ಸ್ಥಗಿತಗೊಳಿಸಿ ಮುಷ್ಕರ ಮುಂದುವರಿಸಲಾಗುವುದು’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೈ.ಪ್ರಸಾದ್ ಎಚ್ಚರಿಸಿದರು.

ಪುರಸಭೆ ಅಧ್ಯಕ್ಷೆ ಸುನಂದ ಮಂಜುನಾಥ್ ಬಾಳೆಕಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಸಂಘಟನೆ ಕಾನೂನು ಸಲಹೆಗಾರ ರಾಜ್ಕುಮಾರ್, ಮುಖ್ಯಾಧಿಕಾರಿ ಭರತ್, ಸುರೇಶ್, ಸೈಯದ್, ಪರಶುರಾಮ್, ಅರುಣ್ಕುಮಾರ್, ರವಿ, ಗುಡದಯ್ಯ, ರಂಗನಾಥ್, ಸವಿತಾ, ಶಶಿಕಲಾ, ಗೀತಾ, ಸ್ವಾತಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.