ಸೋಮವಾರ, ಜೂಲೈ 6, 2020
23 °C

ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪ; ಆಭರಣ ಮಳಿಗೆ ವಿರುದ್ಧ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಬುರ್ಖಾ ಧರಿಸಿ ಬಂದ ಮಹಿಳೆಗೆ ಅವಮಾನಿಸಿದ ಆರೋಪದ ಮೇಲೆ ಇಲ್ಲಿನ ಗೋಪಿ ವೃತ್ತದ ಬಳಿ ಇರುವ ಚಿನ್ನಾಭರಣ ಮಳಿಗೆ ವಿರುದ್ಧ ಗುರುವಾರ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನಗರದ ಮಾರ್ನವಮಿ ಬೈಲ್‌ನ ಜಫ್ರುಲ್ಲಾ ಸತ್ತರ್ ಖಾನ್ ಅವರು ಪತ್ನಿ ಜತೆ ಮಳಿಗೆಗೆ ಚಿನ್ನಾಭರಣ ಖರೀದಿಸಲು ಹೋಗಿದ್ದಾರೆ. ಆಗ ಅಲ್ಲಿನ ವ್ಯವಸ್ಥಾಪಕ, ಕಾವಲುಗಾರರು ಬುರ್ಖಾ ತೆಗೆದು, ಮಾಸ್ಕ್‌ ಧರಿಸಿ ಬರುವಂತೆ, ಇಲ್ಲವೇ ಹೊರಗೆ ಹೋಗುವಂತೆ ಜನರ ಎದುರೇ ಅವಮಾನಿಸಿದ್ದಾರೆ ಎಂದು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ದೂರು ನೀಡುವ ಉದ್ದೇಶ ಇರಲಿಲ್ಲ. ಭವಿಷ್ಯದಲ್ಲಿ ನಮ್ಮಂತೆ ಸಮಾಜದ ಇತರೆ ಮಹಿಳೆಯರಿಗೂ ಅವಮಾನವಾಗಬಾರದು ಎನ್ನುವ ಕಾರಣಕ್ಕೆ ದೂರು ನೀಡಿರುವುದಾಗಿ ಜಫ್ರುಲ್ಲಾ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು