ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಜಲಪಾತ ದರ್ಶನಕ್ಕೆ ಬೇಕು ಕೋವಿಡ್ ನೆಗೆಟಿವ್ ದೃಢೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ಪ್ರಕೃತಿ ದತ್ತವಾದ ಜೋಗ ಜಲಪಾತ ವೀಕ್ಷಣೆಗೆ ಆ. 5ರಿಂದ ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ದೃಢೀಕರಣ ಪತ್ರವನ್ನು ಹೊಂದಿರ ಲೇಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲ ಪ್ರವಾಸಿತಾಣ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಅನ್ವಯ ವಾಗುವಂತೆ ಕೊರೊನಾ ಮಾರ್ಗಸೂಚಿ ಯನುಸಾರ ಹೊರಡಿಸಿರುವ ಆದೇಶ ಪತ್ರದ ಬಗ್ಗೆ ಅವರು ಮಾಹಿತಿ ನೀಡಿದರು.

ಪ್ರವಾಸಿಗರು 72 ಗಂಟೆಗಳ ಮುಂಚಿತವಾಗಿ ಪಡೆದಿರುವ ಆರ್‌ಟಿ–ಪಿಸಿಆರ್ ಕೊರೊನಾ ಪರೀಕ್ಷಾ ಪ್ರಮಾಣ ಪತ್ರವನ್ನು ತೋರಿಸಿದಲ್ಲಿ ಮಾತ್ರ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರದಲ್ಲಿ ಜಲಪಾತ ವೀಕ್ಷಣೆಗೆ ಅನುಮತಿ ಲಭ್ಯವಾಗಲಿದೆ. ಸುರಕ್ಷತಾ ನಿಯಮಗಳ ಜಾರಿ ಮತ್ತು ಪಾಲನೆಗೆ ಪೊಲೀಸ್ ಇಲಾಖೆ, ಪ್ರಾಧಿಕಾರದ ಭದ್ರತಾ ಸಿಬ್ಬಂದಿ ಮತ್ತು ಕೋವಿಡ್ ಇನ್ಸಿಡೆಂಟ್ ಕಮಾಂಡರ್‌ಗಳು ಕಾರ್ಯ ನಿರ್ವಹಿಸುತ್ತಾರೆ. ಈ ಮಾರ್ಗಸೂಚಿಗೆ ಸ್ಥಳೀಯರು, ಜಿಲ್ಲೆಯವರು, ಪರ ಊರಿನವರು ಎಂಬ ಯಾವುದೇ ನಿಯಮ ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದರು.

ಕಾರ್ಗಲ್ ಸಬ್‌ಇನ್‌ಸ್ಪೆಕ್ಟರ್ ತಿರುಮಲೇಶ್ ಮಾತನಾಡಿ, ‘ಜೋಗ ಜಲಪಾತಕ್ಕೆ ಲಗತ್ತಾಗಿರುವ ಎಲ್ಲ ಹೋಟೆಲ್, ಲಾಡ್ಜ್‌ ಮತ್ತು ಹೋಂ ಸ್ಟೇಗಳಿಗೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ನೋಟಿಸ್ ನೀಡಿ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯಗೊಳಿಸಲಾಗುವುದು. ವಡನ್ ಬೈಲು ಪದ್ಮಾವತಿ ದೇವಸ್ಥಾನ, ತಳಕಳಲೆ ಜಂಗಲ್ ಲಾಡ್ಜ್ ರೆಸಾರ್ಟ್‌, ತಳಕಳಲೆ ಜಲಸಾಹಸ ತಾಣ, ಕಾರ್ಗಲ್ ಪಟ್ಟಣದ ಹೋಟೆಲ್ ಲಾಡ್ಜ್‌ಗಳು ಸೇರಿ ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಸರ್ಕಾರದ ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಜೋಗ ಜಲಪಾತ ವೀಕ್ಷಣೆಗೆ ಒಂದು ಕಾಲದಲ್ಲಿ ಯಾರ ಅಪ್ಪಣೆಯೂ ಬೇಕಿರಲಿಲ್ಲ. ಶುಲ್ಕ ಪಾವತಿಯ ಅಗತ್ಯವೂ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಜಲಪಾತ ದರ್ಶನಕ್ಕೆ ಗೇಟ್ ನಿರ್ಮಿಸಿ ಪ್ರವೇಶ ಶುಲ್ಕ ವಿಧಿಸಿದರು. ಆದರೆ, ಈ ಕೊರೊನಾ ಕಾಲಘಟ್ಟದಲ್ಲಿ ಜಲಸಿರಿಯನ್ನು ನೋಡಲು ಶುಲ್ಕದ ಜೊತೆಗೆ ಕೋವಿಡ್ ನೆಗೆಟಿವ್ ದೃಢೀಕರಣ ನೀಡಬೇಕಾಗಿ ಬಂದಿದೆ’ ಎಂದು ಸಮಾಜ ಸೇವಕ ಸದಾಶಿವ ಹೇಳುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು