ಶಿವಮೊಗ್ಗ: ಮಲೆನಾಡಿನಲ್ಲಿ ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆ ಶುಕ್ರವಾರವೂ ತನ್ನ ಆರ್ಭಟ ಮುಂದುವರಿಸಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಹುಲಿಕಲ್ನಲ್ಲಿ 18 ಸೆಂ.ಮೀ ಮಳೆಯಾಗಿದೆ. ಭದ್ರಾ, ಲಿಂಗನಮಕ್ಕಿ, ಮಾಣಿ ಹಾಗೂ ತುಂಗಾ ಜಲಾಶಯಗಳ ಒಳಹರಿವು ಮತ್ತಷ್ಟು ಹೆಚ್ಚಿದೆ.

ಮಳೆ–ಗಾಳಿಯಿಂದ ಹೊಸನಗರ ತಾಲ್ಲೂಕಿನ ಸಂಪೇಕಟ್ಟೆ– ನಿಟ್ಟೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಆದರೆ ಲೈನ್ನಲ್ಲಿ ವಿದ್ಯುತ್ ಸಂಚಾರ ಇಲ್ಲದ ಕಾರಣ, ಯಾವುದೇ ಅನಾಹುತ ಆಗಿಲ್ಲ.

ಸಾಗರ ತಾಲ್ಲೂಕಿನ ತುಮರಿ ಬಳಿಯ ಮುಪ್ಪಾನೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ಗುರುವಾರ ರಾತ್ರಿ ಭಾರೀ ಗಾಳಿ–ಮಳೆಯ ಹೊಡೆತಕ್ಕೆ ಸಮೀಪದ ಲಾಂಚ್ಗಳು ತೇಲಿ ಹೋಗಿದೆ. ಸುಮಾರು 3 ಕಿಲೋ ಮೀಟರ್ ದೂರದ ಜಲಾನಯನ ಪ್ರದೇಶದ ಮಂಡವಳ್ಳಿ ಭಾಗಕ್ಕೆ ತೇಲಿ ಹೋಗಿದ್ದ ಲಾಂಚ್ಗಳನ್ನು ಶುಕ್ರವಾರ ಬೆಳಿಗ್ಗೆ ಸ್ಥಳೀಯ ಮೀನುಗಾರರ ಸಹಾಯದಿಂದ ತೀರಕ್ಕೆ ಎಳೆದು ತರಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.