ಸಾಗರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ 90.21ರಷ್ಟು ಫಲಿತಾಂಶ ಬಂದಿದೆ. ತಾಲ್ಲೂಕಿನಲ್ಲಿ ಒಟ್ಟು 56 ಪ್ರೌಢಶಾಲೆಗಳಿದ್ದು, 2,871 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 2,590 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಆಚಾಪುರದ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿನಿ ಗುಣಶ್ರೀ ಎಂ.ಕಣ್ಣೂರು ಹಾಗೂ ಸಾಗರದ ಸುಭಾಷ್ ನಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ತನಿಷ್ಕ್ 622 ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಬಿಳಿಗಾರಿನ ಸರ್ಕಾರಿ ಪ್ರೌಢಶಾಲೆಯ ದಿಶಾ ಎಚ್.ಆರ್. ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಮೇಘಾ ಜಿ.ಪ್ರಸಾದ್, ಮಂಕಳಲೆಯ ಸೆಂಟ್ ಜೋಸೆಫ್ ಪ್ರೌಢಶಾಲೆಯ ಗೌರೀಶ್ ಎಂ.ಗೌಡ, ನಿರ್ಮಲಾ ಬಾಲಿಕಾ ಪ್ರೌಢಶಾಲೆಯ ಸೌಜನ್ಯಾ ಜೆ.ಮೊಗೇರ್, ಪ್ರಗತಿ ಸಂಯುಕ್ತ ಪ್ರೌಢಶಾಲೆಯ ನಾಗೇಂದ್ರ, ರಾಮಕೃಷ್ಣ ಶಾಲೆಯ ಪ್ರಣವ್ 621 ಅಂಕಗಳನ್ನು ಪಡೆದಿದ್ದಾರೆ.

ಕಟ್ಟಿನಕಾರು, ಬರೂರು, ತಡಗಳಲೆ ಗ್ರಾಮಗಳ ಸರ್ಕಾರಿ ಪ್ರೌಢಶಾಲೆ, ನಗರದ ಗಾಂಧಿ ನಗರದ ಮೌಲಾನಾ ಅಜಾದ್ ಪ್ರೌಢಶಾಲೆ, ಆವಿನಹಳ್ಳಿ ಎ.ಬಿ.ವಾಜಪೇಯಿ ವಸತಿ ಶಾಲೆ, ಇಂದಿರಾಗಾಂಧಿ ವಸತಿ ಶಾಲೆ, ಅಂಬೇಡ್ಕರ್ ವಸತಿ ಶಾಲೆ, ಯಡೇಹಳ್ಳಿಯ ಇಂದಿರಾ ವಸತಿ ಶಾಲೆ, ಸೈದೂರಿನ ಶಾಂತವೇರಿ ಗೋಪಾಲಗೌಡ ಪ್ರೌಢಶಾಲೆ, ಕೇಡಲಸರದ ವಿ.ಸಂ. ಪ್ರೌಢಶಾಲೆ, ಯಡಜಿಗಳಮನೆಯ ಇಕ್ಕೇರಿ ಪ್ರೌಢಶಾಲೆ, ಸಾಗರದ ಹಾಜಿ ಕೋಯಾ ಪ್ರೌಢಶಾಲೆ, ಆಯುಷಾ ಐಡ್ರೋಸ್ ಶಾಲೆ, ಉಳ್ಳೂರಿನ ಸಿಗಂದೂರೇಶ್ವರಿ ಶಾಲೆ, ಆಚಾಪುರದ ಕ್ರಿಯೇಟಿವ್ ಪ್ರೌಢಶಾಲೆ, ಗಿಣಿವಾರದ ಕೊಡಚಾದ್ರಿ ಪ್ರೌಢಶಾಲೆಗೆ ಶೇ 100 ಫಲಿತಾಂಶ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.