ಸೋಮವಾರ, ಆಗಸ್ಟ್ 15, 2022
23 °C

‘ಆಶಾ‌ ಕಾರ್ಯಕರ್ತರಿಗೆ ಹಣ ಕೊಡಲು ರೈತರ ಖಜಾನೆಗೆ ಕೈ ಹಾಕಿದ ಬಿಜೆಪಿ‌ ಸರ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅತ್ತೆಯ ಹಣವನ್ನು ಸೊಸೆ ದಾನ ಮಾಡಿದಂತೆ ಬಿಜೆಪಿ‌ ಸರ್ಕಾರ ಆಶಾ‌ ಕಾರ್ಯಕರ್ತರಿಗೆ ಹಣ ಕೊಡಲು ರೈತರ ಖಜಾನೆಗೆ ಕೈ ಹಾಕಿದೆ ಎಂದು ಮಾಜಿ‌ ಸಚಿವ ಕಿಮ್ಮನೆ ರತ್ನಾಕರ್‌ ಕುಟುಕಿದರು.

ಕೊರೊನಾ‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ  ಆಶಾ   ಕಾರ್ಯಕರ್ತೆ ಹಿತ ಕಾಯಬೇಕಾದದ್ದು, ಸರ್ಕಾರದ ಜವಬ್ದಾರಿ. ಆದರೆ, ಈ ಜವಬ್ದಾರಿಯನ್ನು ಸೊಸೈಟಿ ಗಳಿಗೆ ವಹಿಸಿ, ಆಶಾ ಕಾರ್ಯಕರ್ತೆ ಯರಿಗೆ ದಾನ‌ ನಿಡುವಂತೆ ಸರ್ಕಾರ ನಿರ್ದೇಶನ ನೀಡಿರುವುದು. ಬಿಜೆಪಿಗೆ ಆಡಳಿತ ನಡೆಸಲು ಬರುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಛೇಡಿಸಿದರು.

ಕೋವಿಡ್ ನಿಯಂತ್ರಣ ಸಾಮಗ್ರಿ ಖರೀದಿ ಅವ್ಯವಹಾರದ ಸಮಗ್ರ ತನಿಗೆಗೆ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು