ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಮಕ್ಕಳು ಕಾರ್ಪೊರೇಟ್ ಕಂಪನಿಯ ಗುಲಾಮರಾಗಿದ್ದಾರೆ. ಹಾಗಾಗಿಯೇ, ರೈತರಿಗೆ ಮಾರಕವಾದ ಭೂ ಸುಧಾರಣಾ ಕಾಯ್ದೆಗೆ ಒಲವು ತೋರುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ದೂರಿದರು.

ರೈತರು ಬೆಳೆದ ನಿಂಬೆಹಣ್ಣು ಮಾರಾಟ ಮಾಡಲು ಮಂಡ್ಯದಿಂದ ಬಂದಿದ್ದ ಯಡಿಯೂರಪ್ಪ ಇಂದು ರೈತರನ್ನೇ ಮಾರಲು ಹೊರಟಿದ್ದಾರೆ. ಹಿಂದೆ ಚೆಕ್ ಮೂಲಕ ಹಣ ಪಡೆದು ಜೈಲಿಗೆ ಹೋದರು. ಈಗ ಅವರ ಮಕ್ಕಳು ಆರ್‌ಟಿಜಿಎಸ್ ಮೂಲಕ ಹಣ ಪಡೆಯುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಕುಟುಂಬ ಬಡವರು, ದಲಿತರು, ಅಲ್ಪ ಸಂಖ್ಯಾತರ ದಮನ ಮಾಡುತ್ತಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಇದನ್ನೂ ಓದಿ:ತೇಜಸ್ವಿ ಸೂರ್ಯ ಹೇಳಿಕೆ ಕೇಳಿ ಹೂಡಿಕೆದಾರರು ಬೆಂಗಳೂರಿಗೆ ಬರುತ್ತಾರೆಯೇ: ಡಿಕೆಶಿ

ಅಧಿಕಾರಕ್ಕೆ ಬಂದ 24 ಗಂಟೆಯ ಒಳಗೆ ಗೋ ಹತ್ಯೆ ನಿಷೇಧಿಸುವುದಾಗಿ ಹೇಳಿದ್ದ ಯಡಿಯೂರಪ್ಪ, ಈಶ್ವರಪ್ಪ ಮೌನವಾಗಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದರೂ ತಮ್ಮ ಹಿಂಬಾಲಕರಿಗೆ ಅಧಿಕಾರ ಕೊಡಿಸಲು ಈಶ್ವರಪ್ಪ ವಿಫಲರಾಗಿದ್ದಾರೆ. ತಾವು, ತಮ್ಮ ಪುತ್ರನ ಶ್ರೇಯಸ್ಸಿಗೆ ಸೀಮಿತರಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಪಾಲಿಗೆ ಅವರು ನಾಯಿ ಮೊಲೆಯ ಹಾಲು ಎಂದು ಕುಟುಕಿದರು.

ಸಂಸದ ತೇಜಸ್ವಿ ಸೂರ್ಯಗೆ ಅಧಿಕಾರದ ಮದ ನೆತ್ತಿಗೇರಿದೆ. ರಾಜ್ಯದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಅವರ ಹೇಳಿಕೆ ಖಂಡನೀಯ. ಇದು ನಿಜವಾಗಿದ್ದರೆ ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕೃಷಿ ಮಸೂದೆಗಳ ವಿರುದ್ಧ ನಿಂತ ಕಾಂಗ್ರೆಸ್ಗೆ ಅದರದ್ದೇ ಪ್ರಣಾಳಿಕೆ ಮೂಲಕ ತಿರುಗೇಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.