ಗುರುವಾರ , ಆಗಸ್ಟ್ 5, 2021
29 °C

ಜಾರಕಿಹೊಳಿ ನಾಗ್ಪುರ ಭೇಟಿಗೆ ವಿಶೇಷ ಅರ್ಥವಿಲ್ಲ: ಈಶ್ವರಪ್ಪ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

DH Photo

ಶಿವಮೊಗ್ಗ: ಶಾಸಕ ರಮೇಶ ಜಾರಕಿಹೊಳಿ ನಾಗ್ಪುರ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾರೂ ಬೇಕಾದರೂ ಅಲ್ಲಿಗೆ ಹೋಗಬಹುದು ಎಂದು ಈಶ್ವರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು. ಜಾರಕಿಹೊಳಿ ಅವರಷ್ಟೇ ಅಲ್ಲ. ಮಾಧ್ಯಮದವರೂ ಭೇಟಿ ಕೊಡಬಹುದು. ನಾಗ್ಪುರ ಕಚೇರಿ ಇರುವುದೆ ಎಲ್ಲರೂ ಸೇರಿಕೊಂಡು ದೇಶ ಸೇವೆ ಮಾಡಲು. ದೇಶಕ್ಕೆ, ಸಮಾಜಕ್ಕೆ ಒಳಿತು ಬಯಸುವ ಯಾರಾದರೂ ಅಲ್ಲಿಗೆ ಹೋಗಬಹುದು ಎಂದು ಪ್ರತಿಕ್ರಿಯಿಸಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ಬೆಳವಣಿಗೆಗಳ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸಿರುವ ವಿಷಯ ನನಗೆ ಖಚಿತವಾಗಿ ಗೊತ್ತಿಲ್ಲ. ಬಹುಶಃ ಕೊಟ್ಟಿರಬಹುದು ಎಂದುಕೊಂಡಿದ್ದೇನೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು