ಗುರುವಾರ , ಸೆಪ್ಟೆಂಬರ್ 16, 2021
26 °C

ಆನಂದಪುರ: ಕೆರೆಗೆ ಬಿದ್ದ ಸಾರಿಗೆ ಬಸ್‌, ಬೈಕ್ ಸವಾರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನಂದಪುರ (ಸಾಗರ ತಾ.): ಇಲ್ಲಿಗೆ ಸಮೀಪದ ಕಾಸ್ಪಾಡಿ ಬಳಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬಸ್ ಕೆರೆಗೆ ಬಿದ್ದಿದ್ದು, ಬೈಕ್‌ ಸವಾರ ದೀಪಕ್‌ (36) ಮೃತಪಟ್ಟಿದ್ದಾರೆ.

ಸಾಗರದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬಸ್ ಹಾಗೂ ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿದ್ದ ಬೈಕ್‌ ನಡುವೆ ಡಿಕ್ಕಿಯಾಗಿದೆ. ಎದುರಿನಿಂದ ಬಂದ ಹಸುವನ್ನು ತಪ್ಪಿಸಲು ಹೋದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಕೆರೆಗೆ ಉರುಳಿ ಬಿದ್ದಿದೆ. ಸ್ಥಳೀಯರ ಸಹಾಯದಿಂದ ಬಸ್‌ನಲ್ಲಿದ್ದ 22 ಜನರನ್ನು ರಕ್ಷಣೆ ಮಾಡಲಾಗಿದೆ.

ಅಪಘಾತದಿಂದ ಬೈಕ್‌ ಸವಾರ ದೀಪಕ್‌ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ರಸ್ತೆ ವಿಸ್ತರಣೆಗೆ ಆಗ್ರಹ: ‘ಕಾಸ್ಪಾಡಿಯ ಈ ತಿರುವಿನಲ್ಲಿ ಬಹಳಷ್ಟು ಅಪಘಾತಗಳು ನಿರಂತರವಾಗಿ ಸಂಭವಿಸುತ್ತಲೇ ಇರುತ್ತವೆ. ಅದಕ್ಕೆ ಪ್ರಮುಖ ಕಾರಣ ಹೆಚ್ಚಿನ ತಿರುವು ಇರುವುದು ಹಾಗೂ ಸರಿಯಾದ ತಡೆಗೋಡೆ ಇಲ್ಲದಿರುವುದು. ಜೆತೆಗೆ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿಗಳು ಎತ್ತರಕ್ಕೆ ಬೆಳೆದಿದ್ದು, ಎದುರಿಗೆ ಬರುವ ವಾಹನಗಳು ಕಾಣಿಸುವುದಿಲ್ಲ. ಅವುಗಳ ತೆರವಿಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಸ್ಥಳೀಯರು ಆರೋಪಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು