ಪ್ರಜಾವಾಣಿ ವಾರ್ತೆ

ಶಿವಮೊಗ್ಗ: ಬೆಂಗಳೂರಿನ ಜಪಾನ್ ಕಾನ್ಸುಲೇಟ್‌ನ ಡೆಪ್ಯೂಟಿ ಕೌನ್ಸಲ್ ಜನರಲ್ ಮಾರೋವ್ ಕಟ್ಸುಮಾಸಾ ಕುವೆಂಪು ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಶೈಕ್ಷಣಿಕ ಸಂಶೋಧನಾ ಒಪ್ಪಂದಗಳು ಮತ್ತು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳಿಗಾಗಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಮಾರೋವ್ ಕಟ್ಸುಮಾಸಾ ಮತ್ತು ಭಾರತ–ಜಪಾನ್ ದೇಶಗಳ ವಾಣಿಜ್ಯ ಮತ್ತು ಔದ್ಯೋಗಿಕ ಮಂಡಳಿ
ವ್ಯವಸ್ಥಾಪಕರಾದ ಸವಿತಾ ಎ.ಎಸ್. ಗುರುವಾರ ಕುವೆಂಪು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು. ಜಪಾನ್‌ನ ಶಿಕ್ಷಣ ಸಂಸ್ಥೆಗಳು ಮತ್ತು ಕುವೆಂಪು ವಿವಿಯ ನಡುವಿನ ಶೈಕ್ಷಣಿಕ– ಸಂಶೋಧನಾ ಚಟುವಟಿಕೆಗಳ ವಿನಿಮಯದ ಸಾಧ್ಯತೆ ಕುರಿತು ಚರ್ಚಿಸಿದರು.

ವಿಶ್ವವಿದ್ಯಾಲಯದಲ್ಲಿನ ಎಲ್ಲ ವಿಭಾಗಗಳ ಮುಖ್ಯಸ್ಥರು, ನಿಕಾಯಗಳ ನಿರ್ದೇಶಕರು ಮತ್ತು ಉನ್ನತ ಪ್ರಾಧ್ಯಾಪಕರೊಂದಿಗೆ ಸಭೆ ನಡೆಸಿದ ಅವರು, ಗುಣಮಟ್ಟದ ಶಿಕ್ಷಣ, ಸಂಶೋಧನಾ ಚಟುವಟಿಕೆಗಳು, ಗ್ರಾಮೀಣ ವಿದ್ಯಾರ್ಥಿಗಳ ಸೃಜನಶೀಲತೆಗಳ ಕುರಿತು ಮಾಹಿತಿ ಪಡೆದು ಮೆಚ್ಚುಗೆ ಸೂಚಿಸಿದರು. ಮುಂಬರುವ ದಿನಗಳಲ್ಲಿ ಜಪಾನ್ ವಿವಿಗಳು, ಶಿಕ್ಷಣ ಸಂಸ್ಥೆಗಳೊಂದಿಗೆ ಕುವೆಂಪು ವಿವಿಯು ಶೈಕ್ಷಣಿಕ ಮತ್ತು ಸಂಶೋಧನಾ ವಿಷಯಗಳಲ್ಲಿ ವಿದ್ಯಾರ್ಥಿ ವಿನಿಮಯ, ಒಪ್ಪಂದಗಳ ಕೈಗೊಳ್ಳಲು ಮುಂದಾದಲ್ಲಿ ಕಾನ್ಸುಲೇಟ್ ವತಿಯಿಂದ ಸಂಪೂರ್ಣ ಸಹಕಾರ, ನೆರವು ನೀಡಲಾಗುವುದು ಎಂದು ಬೋಧಕರನ್ನು
ಉತ್ತೇಜಿಸಿದರು.

ಈ ಸಂದರ್ಭದಲ್ಲಿ ಫಿಜಿಟ್ಸು ಕನ್ಸಲ್ಟಿಂಗ್ ಇಂಡಿಯ ಸಂಸ್ಥೆಯ ಹಿರಿಯ ಮುಖ್ಯಸ್ಥರಾದ ಸವೀನ್ ಚಂದ್ರಶೇಖರ್, ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ನವೀನ್ ಕುಮಾರ್ ಎಸ್, ಪ್ರೊ.ರಿಯಾಜ್ ಅಹಮದ್ ಕೆ, ಐಕ್ಯೂಎಸಿ ವಿಭಾಗದ ಪ್ರೊ.ವೈ.ಎಲ್. ಕೃಷ್ಣಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.