ಶುಕ್ರವಾರ, 9 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸಂಸ್ಕೃತ ಸಮಾಜ ಎಲ್ಲರ ಆಶಯವಾಗಲಿ: ಶಿವಾನಂದ ಕಳವೆ

ಸನ್ಮಾನ ಕಾರ್ಯಕ್ರಮದಲ್ಲಿ ಜಲತಜ್ಞ ಶಿವಾನಂದ ಕಳವೆ ಕಿವಿಮಾತು
Last Updated 18 ಅಕ್ಟೋಬರ್ 2021, 6:21 IST
ಅಕ್ಷರ ಗಾತ್ರ

ಆನಂದಪುರ: ಸಮಾಜದಲ್ಲಿ ಅನೇಕ ಜನರು ಕೆಲವು ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಜಲ ಸಂರಕ್ಷಣೆ ಮಾಡುವ ಕೆಲಸಕ್ಕೆ ಕೈಜೋಡಿಸುವ ಅನಿವಾರ್ಯ ಇದೆ ಎಂದು ಜಲತಜ್ಞ ಶಿವಾನಂದ ಕಳವೆ ತಿಳಿಸಿದರು.

ಸಮೀಪದ ಮಹಂತಿನಮಠದ ಚಂಪಕ ಸರಸು ಆವರಣದಲ್ಲಿ ಭಾನುವಾರ ಕರ್ನಾಟಕ ಜಾನಪದ ಪರಿಷತ್ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಆಯೋಜಿಸಿದ್ದ ದಸರಾ ಪಾರಂಪರಿಕ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುತೇಕ ಸಂದರ್ಭದಲ್ಲಿ ಕವಿಗಳು, ಕಥೆಗಾರರು, ಕಾದಂಬರಿಕಾರರ ವಸ್ತು ಪರಿಸರವಾಗಿರುತ್ತದೆ. ಪರಿಸರ ಮತ್ತು ನೀರು ಇಲ್ಲದೆ ಹೋದಲ್ಲಿ ಯಾವ ಶಕ್ತಿಯೂ ಪರಿಪೂರ್ಣವಾಗುವುದಿಲ್ಲ. ನೀರು ಇದ್ದಲ್ಲಿ ಉತ್ಸವ ಮತ್ತು ಉತ್ಸಾಹ ಎರಡೂ ಇರುತ್ತದೆ ಎಂದುತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಮಾತನಾಡಿ, ‘ಸುಸಂಸ್ಕೃತ ಸಮಾಜ ನಿರ್ಮಾಣ ಎಲ್ಲರ ಆಶಯವಾಗಬೇಕು. ಕೊರೊನಾ ಕಾಲಘಟ್ಟದಲ್ಲಿ ಎರಡು ವರ್ಷ ಸಾಂಸ್ಕೃತಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಇದೀಗ ಕೊರೊನಾ ನಂತರ ಸ್ಥಿತಿ ಸುಧಾರಿಸುತ್ತಿದ್ದು, ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಯುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಮೂಲಕ ಮನಸ್ಸುಗಳನ್ನು ಕಟ್ಟುವ ಕೆಲಸ ನಮ್ಮ ವೇದಿಕೆಗಳು ಮಾಡುತ್ತಿವೆ’ ಎಂದರು.

ಜನಪದ ಕಲಾವಿದ ಬಿ. ಟಾಕಪ್ಪ ಕಣ್ಣೂರು, ಜಿ.ಸಿ. ಮಂಜಪ್ಪ ಕಣ್ಣೂರು, ಬಾಲ ಕಲಾವಿದ ಅಕ್ಷಿ ಮಿಥುನ್, ಶಿಕ್ಷಕಿ ಶಾಂತಕುಮಾರಿ, ಆರೋಗ್ಯ ಇಲಾಖೆಯ ಈಶ್ವರ್ ಅವರನ್ನು ಸನ್ಮಾನಿಸಲಾಯಿತು.

ವಿ. ಗಣೇಶ್, ವಿಷ್ಣುಮೂರ್ತಿ, ವಸಂತ ಕುಗ್ವೆ, ಭದ್ರಪ್ಪ ಗೌಡ, ಅನಂತ ಹರಿತ್ಸ, ರಾಜು ಭಾಗವತ್, ನಾರಾಯಣಪ್ಪ ಕುಗ್ವೆ, ಸ್ಫೂರ್ತಿ, ಅರುಣ್ ಜಾವಗಲ್, ಗಂಗಮ್ಮ ಆರ್. ಕವನ ವಾಚಿಸಿದರು.

ಜನಪದ ಪರಿಷತ್ ಆನಂದಪುರ ಘಟಕದ ಅಧ್ಯಕ್ಷ ಬಿ.ಡಿ. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಗಜೇಂದ್ರ, ಪ್ರಮುಖರಾದ ರಾಜೇಂದ್ರಗೌಡ, ಉಮೇಶ್ ಹಿರೇನೆಲ್ಲೂರು, ಕವಿತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT