ಕಾರ್ಗಲ್: ರಾಜ್ಯದ ವಿದ್ಯುತ್ ಬೇಡಿಕೆಯ ಶೇ 25ರಷ್ಟು ಪೂರೈಸುವ ಲಿಂಗನಮಕ್ಕಿ ಜಲಾಶಯದಲ್ಲಿ 1,812 ಅಡಿ(ಸಮುದ್ರ ಮಟ್ಟದಿಂದ) ನೀರು ಭಾನುವಾರ ಸಂಗ್ರಹವಾಗಿದೆ.

ಲಿಂಗನಮಕ್ಕಿ ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 159ಟಿಎಂಸಿ ಇದ್ದು, ಶೇ 85ರಷ್ಟು ಪ್ರಮಾಣ ಪ್ರಸಕ್ತ ಭರ್ತಿಯಾದಂತಾಗಿದೆ. ಒಳಹರಿವು ಭಾನುವಾರ ಬೆಳಿಗ್ಗೆಯ ಮಾಪನದಂತೆ 25 ಸಾವಿರ ಕ್ಯೂಸೆಕ್ ಇದ್ದು, ಜಲಾನಯನ ಪ್ರದೇಶದಲ್ಲಿ ಹೆಚ್ಚಿರುವ ಮಳೆಯಿಂದ ಈ ಪ್ರಮಾಣಸಂಜೆಯಾಗುತ್ತಿದ್ದಂತೆ ಗುಣವಾಗುವ ಸಾಧ್ಯತೆಯಿದೆ.ಅಣೆಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ನೀರು 1816ರ ಗಡಿಯನ್ನು ದಾಟಿದ ನಂತರ ಮೇಲಧಿಕಾರಿಗಳು ಮತ್ತು ಕೇಂದ್ರ ಕಚೇರಿಯ ಆದೇಶದ ಮೇರೆಗೆ ಒಳಹರಿವನ್ನು ಗಮನದಲ್ಲಿಟ್ಟುಕೊಂಡು ರೇಡಿಯಲ್ ಗೇಟಿನ ಮೂಲಕ ಹೊರಹರಿಸಲಾಗುವುದು ಎಂದು ಎಂದು ಕೆಪಿಸಿ ಕಾರ್ಯ ನಿರ್ವಾಹಕ ಎಂಜಿನಿಯರ್ ಶಿವಕುಮಾರ್ ಮಾಹಿತಿ ನೀಡಿದರು.

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿಕೇವಲ 1784.45 ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿಗೆ ಇದನ್ನು ಹೋಲಿಕೆ ಮಾಡಿ ನೋಡಿದಾಗ ಸುಮಾರು 28 ಅಡಿ ನೀರು ಹೆಚ್ಚುವರಿಯಾಗಿ ಈ ಬಾರಿ ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ 2570 ಮಿಲಿ ಮೀಟರ್ ಮಳೆಯಾಗಿದೆ. ಇನ್ನೂ ಹೆಚ್ಚಿನ ಮಳೆಯ ನಿರೀಕ್ಷೆಯನ್ನು ಹವಾಮಾನ ತಜ್ಞರು ನೀಡಿರುವುದರಿಂದ ಶೀಘ್ರವಾಗಿ ಲಿಂಗನಮಕ್ಕಿ ಭರ್ತಿಯಾಗುವ ಲಕ್ಷಣಗಳು ಕಂಡು ಬರುತ್ತಿದೆ ಎಂದು ಅವರು ತಿಳಿಸಿದರು.

ಲಿಂಗನಮಕ್ಕಿ ಭರ್ತಿಯಾಗಿ ನೀರು ಹೊರಗೆ ಹರಿಸಿದರೆ ಜೋಗದ ಜಲಪಾತಗಳು ಇನ್ನಷ್ಟು ರಮಣೀಯವಾಗಲಿವೆ. ಮಳೆ ಇದೇ ರೀತಿ ಮುಂದುವರಿದರೆ ನಾಲ್ಕೈದು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ.

ಜೋಗದಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ

ವಿಶ್ವ ವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಆಗಸ್ಟ್ ತಿಂಗಳ ವಾಡಿಕೆಯಂತೆ ಶನಿವಾರ ಮತ್ತು ಭಾನುವಾರ ಭಾರಿ ಪ್ರವಾಸಿಗರು ಬರಬೇಕಿತ್ತು. ಆದರೆ ಈ ಬಾರಿ ಪ್ರವಾಸಿಗರ ಸಂಖ್ಯೆ ಕುಸಿತವಾಗಿದೆ

50 ಸಾವಿರದಿಂದ 75 ಸಾವಿರ ಪ್ರವಾಸಿಗರು ಬರುವ ನಿರೀಕ್ಷೆಯಿತ್ತು. ಸುಮಾರು 15 ಸಾವಿರ ಪ್ರವಾಸಿಗರು ಮಾತ್ರ ಬಂದಿರುವುದ ಆಶ್ಚರ್ಯ ಉಂಟು ಮಾಡಿದೆ.

ಶನಿವಾರ ಸೂರ್ಯಗ್ರಹಣ ಮತ್ತು ಅಮಾವಾಸ್ಯೆ ಬಂದಿರುವುದು ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಸಿಗಂದೂರು ಸೇರಿ ಹಲವಾರು ಕ್ಷೇತ್ರಗಳ ಸುತ್ತ ಮುತ್ತ ಮಳೆ ಹೆಚ್ಚಿರುವುದು ಕೂಡ ಕಾರಣವಾಗಿರಬಹುದು ಎಂದು ಪ್ರಾಧಿಕಾರದ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.