ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಡಿಬಿ ಪುನರ್‌ರಚನೆ, ಹೊಸ ರೂಪ ನೀಡಲು ಒಲವು

ಪ್ರೆಸ್‌ಟ್ರಸ್ಟ್ ಸಂವಾದ ಕಾರ್ಯಕ್ರಮದಲ್ಲಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸುಳಿವು
Last Updated 14 ಅಕ್ಟೋಬರ್ 2020, 15:48 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡು ಪ್ರದೇಶ ಅಭಿವೃದ್ಧಿಮಂಡಳಿಯನ್ನುಪ್ರಾದೇಶಿಕವಾಗಿ ಪುನರ್‌ರಚಿಸಿ, ಹೊಸ ರೂಪ ನೀಡುವ ಚಿಂತನೆ ನಡೆದಿದೆ ಎಂದು ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಹೇಳಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂಎಡಿಬಿಅಗತ್ಯ ಕುರಿತು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನೆ ಎತ್ತಿದ್ದಾರೆ. ಆದರೆ, ಮಲೆನಾಡಿಗೆ ಮಂಡಳಿಯ ಅಗತ್ಯವಿದೆ.ಈ ಭಾಗದ ಅಭಿವೃದ್ಧಿಗೆ ಒತ್ತು ಸಿಗಲಿದೆ.ಕೃಷಿ ಇಲಾಖೆ ಸಮೀಕರಿಸಿಕೊಂಡರೆ ಹೆಚ್ಚು ಸುಧಾರಣೆ ತರಲು ಸಾಧ್ಯ. ಒಂದಿಷ್ಟು ಬದಲಾವಣೆತರಬೇಕಿದೆ.ಬಿಳಿಯ ಆನೆಆಗದಂತೆ ಎಚ್ಚರ ವಹಿಸುವ ಅಗತ್ಯವಿದೆ. ಕೋವಿಡ್ ಸಮಯದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಪ್ರವಾಸ ಮಾಡಲಾಗುವುದು.ಶೋಷಿತರ, ಬಡವರ, ಮಲೆನಾಡು ಭಾಗದ ಜನರ ಸೇವೆಗೆ ಶ್ರಮಿಸುತ್ತೇನೆ ಎಂದರು.

ಮಂಡಳಿ ವಿಶೇಷವಾಗಿ ರೈತರಿಗೆ ನೆರವು ನೀಡಲು ಬಯಸುತ್ತವೆ. ಅಡಿಕೆ ಬೆಳೆಗಾರರಿಗೆಅವರಲ್ಲಿ ಹೊಸ ಬಗೆಯ ತಂತ್ರಜ್ಞಾನದ ತಿಳಿವಳಿಕೆ, ಸಂಪ್ರದಾಯಿಕಬೇಸಾಯದ ಮಾಹಿತಿ, ಕಾರ್ಯಾಗಾರಗಳು, ವಿಜ್ಞಾನಿಗಳನ್ನು ಬಳಸಿಕೊಂಡು ವೈಜ್ಞಾನಿಕ ತಿಳಿವಳಿಕೆ ನೀಡಲಾಗುವುದು. ಕಾಲುಸಂಕ,ತೂಗು ಸೇತುವೆಗಳಿಗೆ ಆದ್ಯತೆ ನೀಡಲಾಗುವುದು. ಕಿರು ಸೇತುವೆಗಳ ನಿರ್ಮಾಣ ಮಾಡಲಾಗುವುದು.ಪ್ರಮುಖವಾಗಿ ರಸ್ತೆ, ಸಮುದಾಯ ಭವನ, ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಕಿರು ನೀರಾವರಿ ಯೋಜನೆಗಳ ಅಭಿವೃದ್ಧಿಗೆಆದ್ಯತೆ ನೀಡಲಾಗುತ್ತದೆ. ಪ್ರಮುಖವಾಗಿ ಶರಾವತಿ ಮುಳುಗಡೆ ಪ್ರದೇಶದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.

ಎಂಎಡಿಬಿ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸರ್ಕಾರದಿಂದ ಮತ್ತೆ ಅನುದಾನ ಕೇಳಿದ್ದೇವೆ.ಮುಖ್ಯಮಂತ್ರಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರ ಅವುಗಳೆಲ್ಲವನ್ನೂಪೂರ್ಣಗೊಳಿಸುವ ಭರವಸೆ ಇದೆ.ಸುಮಾರು86 ಶಾಸಕರು ಸೇರಿದಂತೆ136 ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದಾರೆ. ಎಲ್ಲ ಶಾಸಕರಿಗೂ ತಲಾ ₹ 1 ಕೋಟಿ ಅನುದಾನ ನೀಡಲಾಗಿದೆ. ಅವರವರ ಕ್ಷೇತ್ರಗಳಲ್ಲಿ ಅಭಿವೃದ್ಧಿಚಟುವಟಿಕೆ ಕೈಗೊಳ್ಳಲು ಸುಮಾರು ₹ 86.55 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಪ್ರಸಕ್ತ ಸಾಲಿನಲ್ಲಿ1,278 ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹ 86 ಕೋಟಿ ಆವಶ್ಯಕತೆ ಇದೆ. ಸುಮಾರು487 ಕಾಮಗಾರಿಗಳು ಪೂರ್ಣಗೊಳ್ಳದೇ ಉಳಿದಿವೆ. ಒಟ್ಟಾರೆ 12,270 ಕಾಮಗಾರಿಗಳುಇವೆಎಂದು ವಿವರ ನೀಡಿದರು.

ಗುತ್ತಿಗೆದಾರರಿಗೆ ಬರಬೇಕಾದ ಬಾಕಿ ಹಣ ಬಿಡುಗಡೆ ಮಾಡಲುಮಂಡಳಿ ಶ್ರಮಿಸುತ್ತಿದೆ. 845 ಹೊಸ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಅನುಮೋದನೆ ನೀಡಿದೆಎಂದು ಮಾಹಿತಿ ನೀಡಿದರು.

ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹಿರಿಯ ಪತ್ರಕರ್ತರಾದ ಗಿರೀಶ್ ಉಮ್ರಾಯ್, ಹುಲಿಮನೆ ತಿಮ್ಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT