ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40 ಕಮಿಷನ್ ಪಡೆಯುತ್ತಿರುವ ಶಾಸಕ ಕುಮಾರ್ ಬಂಗಾರಪ್ಪ: ಮಧು ಬಂಗಾರಪ್ಪ ಆರೋಪ

Last Updated 10 ಜೂನ್ 2022, 3:11 IST
ಅಕ್ಷರ ಗಾತ್ರ

ಸೊರಬ: ‘ಶಾಸಕ ಕುಮಾರ್ ಬಂಗಾರಪ್ಪ ಅವರು ತಮ್ಮ ಆಪ್ತ ಸಹಾಯಕನ ಮೂಲಕ ಅಧಿಕಾರಿಗಳಿಂದ ರೋಲ್ ಕಾಲ್ ಮಾಡಿಸಿ ಶೇ 40 ಕಮಿಷನ್ ಪಡೆಯುತ್ತಿದ್ದಾರೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಆರೋಪಿಸಿದರು.

ಸೊರಬದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರ ಆಪ್ತ ಸಹಾಯಕ ಜನರಿಗೆ ತೊಂದರೆ ಕೊಡುವುದನ್ನು ಕಾಯಕ ಮಾಡಿಕೊಂಡಿದ್ದಾರೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ
ಜನಪ್ರತಿನಿಧಿಯಂತೆ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು.
ಪ್ರಜಾಪ್ರಭುತ್ವದಲ್ಲಿ ಜನರಿಗಿಂತ ದೊಡ್ಡವರು ಯಾರೂ ಇಲ್ಲ. ಹಣದಿಂದಲೇ ಮುಂದಿನ ಚುನಾವಣೆ ಯಲ್ಲಿ ಗೆಲ್ಲುವೆ ಎನ್ನುವ ಅಹಾಂಕರ ಹೊಂದಿರುವ ಶಾಸಕರಿಗೆ ಜನರ ಬಗ್ಗೆ ಅನುಕಂಪವಿಲ್ಲ. ಇಂತಹವರಿಗೆ ಮುಂದಿನ ದಿನಗಳಲ್ಲಿ ಜನರು ತಕ್ಕಪಾಠ ಕಲಿಸಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸವಲಿಂಗಪ್ಪಗೌಡ, ‘ಮೂಡಿ ಹಾಗೂ ಜಡೆ ರಸ್ತೆ ಡಾಂಬರೀಕರಣಕ್ಕೆ ಮಂಜೂರಾದ ₹ 5 ಕೋಟಿ ಅನುದಾನವನ್ನು ಶಾಸಕ ಕುಮಾರ್ ಬಂಗಾರಪ್ಪ ಉದ್ದೇಶಪೂರ್ವಕವಾಗಿ ಕಮಿಷನ್ ಆಸೆಗಾಗಿ ಶಿರಾಳಕೊಪ್ಪ, ಕಡಸೂರು, ಕುಮಟ ರಸ್ತೆಗೆ ವರ್ಗಾಯಿಸಿಕೊಂಡಿದ್ದಾರೆ. ನೀರಾವರಿ, ಸೇತುವೆ ಸೇರಿ ಯಾವುದೇ ಯೋಜನೆಯನ್ನು ಮಂಜೂರು ಮಾಡಿಸಲು ತಾಕತ್ತು ಇಲ್ಲದ ಶಾಸಕರು ಬೇರೆಯವರು ತಂದ ಅನುದಾನಕ್ಕೆ ಕೈಹಾಕಿ ಕಮಿಷನ್
ಹೊಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪುರಸಭೆಗೆ ಒಳಪಟ್ಟ ಜಂಗಿನಕೊಪ್ಪ, ಹಳೇಸೊರಬ, ಮರೂರು, ಕೊಡಕಣಿ, ಹೊಸಪೇಟೆ ಬಡಾವಣೆ, ರಾಜೀವನಗರ, ನಡಹಳ್ಳಿ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸದೆ ಏಕಾಏಕಿ ಪುರಸಭೆಗೆ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡಲು ಹೊರಟಿದ್ದಾರೆ. ಮೊದಲು ಆ ಪ್ರದೇಶಗಳಿಗೆ ಸವಲತ್ತು ಒದಗಿಸಿ ನಂತರ ಪುರಸಭೆಯಲ್ಲಿ ನಿಗದಿಪಡಿಸಿದ ಕಂದಾಯವನ್ನು ವಸೂಲಿ ಮಾಡಲು ಮುಂದಾಗಲಿ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ಕುಪ್ಪಗಡ್ಡೆ ಸಹಕಾರಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ರಾಜಶೇಖರ್, ಪರಶುರಾಮ್ ಸಣಬೈಲ್, ರಶೀದ್ ಸಾಬ್, ಪ್ರಕಾಶ್ ಹಳೇಸೊರಬ, ಶೇಖರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT