ನಿರ್ವಹಣಾ ಕ್ರಮ ಬೆಳೆಗಾರರಿಗೆ ಸಲಹೆ
ಮಳೆ ಇಲ್ಲದಿರುವಾಗ ಕನಿಷ್ಠ 4ರಿಂದ 5 ಗಂಟೆ ಕಾಲ ಪ್ರೊಪಿಕೋನಾಜೋಲ್ 25 ಇ.ಸಿ ಅಥವಾ ಹೆಕ್ಸಾಕೊನಾಝೋಲ್ 5 ಇ.ಸಿ. ಅಥವಾ ಟೆಬುಕೊನಾಝೋಲ್ 28.29 ಇ.ಸಿ. (1 ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ) ಹಾಗೂ ದುಂಡಾಣು ಎಲೆ ಮಚ್ಚೆರೋಗಕ್ಕೆ ಕಾಪರ್ ಆಕ್ಸಿ ಕ್ಲೋರೈಡ್+ ಕಸುಗಾಮೈಸಿನ್ (3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ) 8ರಿಂದ 10 ದಿನಗಳ ಅಂತರದಲ್ಲಿ 2ರಿಂದ 3 ಬಾರಿ ಸಿಂಪರಣೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಶುಂಠಿ ಬೆಳೆಗಾರರು ವಲಯ ಕೃಷಿ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಸೋನ್ಯಾಳ (96630–34398) ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಆರ್.ಗಿರೀಶ್ (97399–16660) ಅವರನ್ನು ಸಂಪರ್ಕಿಸಬಹುದು.