ಮಾರ್ಚ್ 18ರಂದು ಟಿಪ್ಪುನಗರದಲ್ಲಿ ನಾಸೀರ್, ಮೊಹಮ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವವರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮಧ್ಯಪ್ರವೇಶಿಸಿದ್ದ ಪರ್ವೇಜ್, ತನ್ನ ಸಹಚರರೊಂದಿಗೆ ಸೇರಿ ತಂಜೀಮ್ಗೆ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು. ತೀವ್ರವಾಗಿ ಗಾಯಗೊಂಡಿದ್ದ ತಂಜೀಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.