ಬುಧವಾರ, ಅಕ್ಟೋಬರ್ 21, 2020
25 °C

ಶಿರಾಳಕೊಪ್ಪ: ಕೊಲೆ, ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ಕುಸ್ಕೂರು ಗ್ರಾಮದ ಕೆರೆಯಲ್ಲಿ ಈಚೆಗೆ ಸಿಕ್ಕಿದ್ದ ಅಪರಿಚಿತ ಶವ ಪತ್ತೆ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಅಪರಿಚಿತ ಶವ ಗ್ರಾಮದ ರಮೇಶ್‌ (36) ಎಂಬುವವರದ್ದಾಗಿದ್ದು, ಅವರ ಕೊಲೆ ಸಂಬಂಧ ಮಂಜುಳಬಾಯಿ ಹಾಗೂ ಈಕೆಯ ಸಹಾಯಕ್ಕೆ ಬಂದಿದ್ದ ತುಕ್ಕರಾಜನನ್ನು ಬಂಧಿಸಿದ್ದಾರೆ.

‘ಮಂಜುಳಾಬಾಯಿ ಜೊತೆ ರಮೇಶ್‌ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರಲ್ಲಿ ವೈಮನಸ್ಸು ಉಂಟಾಗಿತ್ತು.  ಇದರಿಂದ ಕೊಲೆ ಮಾಡಿ
ದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಎಎಸ್ಪಿ ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸಿಪಿಐ ಗುರುರಾಜ್ ಮೈಲಾರ್, ಸಬ್ ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.