ಶಿವಮೊಗ್ಗ: ‘ಶಿಕ್ಷಕರು ಪಠ್ಯದ ಜ್ಞಾನ ಮಾತ್ರ ನೀಡದೇ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಎಲ್ಲ ವಿಷಯಗಳ ಬಗ್ಗೆಯೂ ಕಲಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ (ಡಯಟ್) ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ಸಲಹೆ ನೀಡಿದರು.

ನಲಿಕಲಿ ಕ್ರಿಯಾಶೀಲ ತಾರೆಯರು ಟ್ರಸ್ಟ್ ಹಾಗೂ ನೋವೆಲ್ ಹೋಪ್ ಫೌಂಡೇಶನ್ ವತಿಯಿಂದ ಇಲ್ಲಿನ ಬಿ.ಎಚ್.ರಸ್ತೆಯ ಡಯಟ್ ಸಂಸ್ಥೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಶಿಕ್ಷಣದಲ್ಲಿ ಜಾರಿಯಲ್ಲಿರುವ ನಲಿಕಲಿ ಬೋಧನಾ ವಿಧಾನದ ಕುರಿತು ಅರಿವು ಮೂಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯು ಅವರ ಭವಿಷ್ಯ ನಿರ್ಮಾಣಕ್ಕೆ ಆಧಾರವಾಗಿದೆ. ಆದ್ದರಿಂದ ಪರೀಕ್ಷಾ ಫಲಿತಾಂಶ ಮಾತ್ರವಲ್ಲದೆ, ತರಗತಿಯಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಪ್ರಶ್ನಿಸುವ ಧೈರ್ಯ, ಸೃಜನಶೀಲತೆ, ಓದು ಬರಹದ ಕೌಶಲದ ಬಗ್ಗೆಯೂ ಶಿಕ್ಷಕರು ನಿಗಾ ವಹಿಸಬೇಕು ಎಂದರು.

‘ಸಂಸ್ಥೆಯು 2022ರಲ್ಲಿ ಆರಂಭಗೊಂಡಿತು. ಇದೊಂದು ಎನ್ಜಿಒ ಮಾದರಿ ಸಂಸ್ಥೆ. ಇದರಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗಿದೆ. ಕಳೆದ ವರ್ಷ 11,000 ಶಾಲಾ ಬ್ಯಾಗ್ ವಿತರಿಸಲಾಗಿತ್ತು. ಈ ಬಾರಿಯೂ ಕೂಡ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ’ ಎಂದು ನೋವೆಲ್ ಹೋಪ್ ಫೌಂಡೇಶನ್ನ ಹಿರಿಯ ಸಿಎಸ್ಆರ್ ಕಾರ್ಯನಿರ್ವಾಹಕ ಆರ್. ದೀಪಕ್ ತಿಳಿಸಿದರು.

ನಲಿಕಲಿ ಕ್ರಿಯಾಶೀಲ ತಾರೆಯರ ತಂಡ ಉತ್ತಮ ಕಾರ್ಯ ಮಾಡುತ್ತಿದೆ. ಇದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರಲು ಸಾಧ್ಯ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಹಿರಿದು. ಇಲ್ಲಿ ಮಕ್ಕಳ ಕಲಿಕೆಯ ಸ್ಥಿತಿಗತಿಯನ್ನು ಅವಲೋಕಿಸುವುದು ಅತ್ಯಂತ ಮುಖ್ಯ ಎಂದು ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಂದ್ರಪ್ಪ ಹೇಳಿದರು.

ಒಂದು ಶಾಲೆ ಅಭಿವೃದ್ಧಿ ಹೊಂದಲು ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರ ಪಾತ್ರ ಹೆಚ್ಚಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಸಾಧ್ಯ. ಸಂಸ್ಥೆಯು ಕಳೆದ 6 ವರ್ಷದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ನಲಿಕಲಿ ಕ್ರಿಯಾಶೀಲ ತಾರೆಯರು ಟ್ರಸ್ಟ್ನ ಜಿಲ್ಲಾ ಘಟಕದ ಅಧ್ಯಕ್ಷೆ ಫೌಜಿಯಾ ಸರವತ್ ತಿಳಿಸಿದರು.

ಸೊರಬ ಕ್ಷೇತ್ರದ ಶಿಕ್ಷಣಾಧಿಕಾರಿ ಪುಷ್ಪಾ, ನಲಿಕಲಿ ತಂಡದ ಗೌರವಾಧ್ಯಕ್ಷೆ ವೈ.ಎಸ್. ಲಲಿತಾ, ಉಪಾಧ್ಯಕ್ಷರಾದ ಕೆ.ಇ. ಸುನಂದಾ, ಎಚ್.ಆರ್.ವಾಸುಕಿ, ಪ್ರಧಾನ ಕಾರ್ಯದರ್ಶಿ ಎಂ. ಭಾಗೀರಥಿ, ಸಹ ಕಾರ್ಯದರ್ಶಿಗಳಾದ ಸುಮಿತ್ರಾ ಹೆಗಡೆ, ಎ.ಜಿ.ಕೃಷ್ಣವೇಣಿ, ಖಜಾಂಚಿ ಎನ್.ಆರ್. ಪವಿತ್ರಾ, ಸಂಘಟನಾ ಕಾರ್ಯದರ್ಶಿ ಪಿ.ಎಂ.ವಾಣಿ, ಪ್ರೇಮಾ, ಪ್ರಮುಖರಾದ ರೇಣುಕಾ, ವಿಜಯ ಕುಮಾರ್, ಗುರುಮೂರ್ತಿ ಇದ್ದರು.

200 ಶಾಲೆಗಳಿಗೆ ಬ್ಯಾಗ್ ವಿತರಣೆ ಜಿಲ್ಲೆಯ 200ಕ್ಕೂ ಹೆಚ್ಚು ಶಾಲೆಗಳಿಗೆ ₹16 ಲಕ್ಷ ಮೌಲ್ಯದ 4000 ಶಾಲಾ ಬ್ಯಾಗ್ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಬಾರಿ ವಿವಿಧ ಜಿಲ್ಲೆಗಳಲ್ಲಿ 30000 ಶಾಲಾ ಬ್ಯಾಗ್ಗಳನ್ನು ಹಂಚುವ ಯೋಜನೆ ಜತೆಗೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಶೂ ಸಾಕ್ಸ್ ಕೂಡ ನೀಡಲಾಗುವುದು. ಕೆಲವು ಸರ್ಕಾರಿ ಶಾಲೆಗಳನ್ನು ಗುರುತಿಸಿ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ. ಪ್ರಸ್ತುತ ಒಳ್ಳೆಯ ಕಾರ್ಯ ಮಾಡುವುದಕ್ಕೆ ಅನೇಕ ಸವಾಲುಗಳಿವೆ. ಆದರೆ ನಲಿಕಲಿ ತಾರೆಯರ ತಂಡ ಇಲ್ಲಿ ಉತ್ತಮ ಸೇವಾ ಮನೋಭಾವ ಹೊಂದಿದೆ ಎಂದು ನೋವೆಲ್ ಹೋಪ್ ಫೌಂಡೇಶನ್ ಕಾರ್ಯನಿರ್ವಾಹಕ ಆರ್. ದೀಪಕ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.