ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾಣನಿಲ್ದಾಣಕ್ಕೆ ಶಾಂತವೇರಿ ಗೋಪಾಲಗೌಡ ಹೆಸರಿಡಿ: ಸಂಘಟನೆಗಳ ಪ್ರತಿಭಟನೆ

Last Updated 15 ಜುಲೈ 2021, 8:09 IST
ಅಕ್ಷರ ಗಾತ್ರ

ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣ ವಾಗುತ್ತಿರುವ ವಿಮಾನನಿಲ್ದಾಣಕ್ಕೆ ‘ಶಾಂತವೇರಿ ಗೋಪಾಲಗೌಡ’ ಹೆಸರಿಡುವಂತೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಒಕ್ಕಲಿಗರ ಒಕ್ಕೂಟ ಹಾಗೂ ಶಾಶ್ವತಿ ಮಹಿಳಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ರಾಜಕಾರಣಿಗಳು ಎಂದರೆ, ಭ್ರಷ್ಟರು, ಸುಳ್ಳರು, ಸ್ವಜನಪಕ್ಷ ಪಾತಿಗಳು, ಸ್ವಾರ್ಥಿಗಳು ಎಂಬ ವಾತಾವರಣ ನಿರ್ಮಾಣವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದ ಶಾಂತವೇರಿ ಗೋಪಾಲಗೌಡರು ಗೇಣಿ ಪದ್ಧತಿ ವಿರುದ್ಧ ಹೋರಾಟ ನಡೆಸಿ ‘ಉಳುವವನೆ ಭೂಮಿಯ ಒಡೆಯ’ ಕಾನೂನು ಜಾರಿಯಾಗಲು ಪ್ರಮುಖ ಪಾತ್ರ ವಹಿಸಿದರು. ಪರಿಶಿಷ್ಟ ವರ್ಗದವರು, ಹಿಂದುಳಿದವರು, ಶ್ರಮಜೀವಿಗಳು, ಜಮೀನಿನ ಮಾಲೀಕರಾಗಲು ಕಾರಣರಾದವರು. ಸ್ವಾರ್ಥ ರಹಿತ ಕೆಲಸ ಮಾಡಿ ಇಡೀ ದೇಶಕ್ಕೆ ಮಾದರಿಯಾದ ರಾಜಕಾರಣಿಯಾಗಿದ್ದಾರೆ. ಪ್ರಾಮಾಣಿಕ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಹೆಸರನ್ನು ವಿಮಾನನಿಲ್ದಾಣಕ್ಕೆ ಇಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗೋ. ರಮೇಶ್ ಗೌಡ, ಶಾಂತಾ ಸುರೇಂದ್ರ, ಎಂ.ರಾಜಣ್ಣ, ದಿನೇಶ್, ನಿಂಗರಾಜು, ದೇವೇಂದ್ರ, ಶಾಂತಮ್ಮ, ಕೀರ್ತಿ, ಪೂರ್ಣೇಶ್, ನರಸಿಂಹ, ಲೋಲಾಕ್ಷಿ, ಭಾಗ್ಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT