ಶಿವಮೊಗ್ಗ ಆಯನೂರು ಸಮೀಪದ ಚಿಕ್ಕದಾನವಂದಿ ಗ್ರಾಮದ ಜಮೀನೊಂದರಲ್ಲಿ ಮೆಕ್ಕೆಜೋಳ ಬಿತ್ತನೆಗೆ ರೈತರು ಸಿದ್ಧತೆ ನಡೆಸಿರುವುದು
ಡಿಎಪಿ ಗೊಬ್ಬರ 50 ಕೆ.ಜಿ.ಗೆ ₹1350 ದರ ಇದೆ. ಬೀಜ ಬಿತ್ತನೆ ಪೂರ್ವದಲ್ಲಿ ರೈತರು ಡಿಎಪಿ ಬದಲಿಗೆ ಸಾರಜನಕ ರಂಜಕ ಮತ್ತು ಪೊಟ್ಯಾಶಿಯಂ ಯುಕ್ತ ಕಾಂಪ್ಲೆಕ್ಸ್ ಎನ್‌ಪಿಕೆ ಗೊಬ್ಬರ ಬಳಸಬೇಕು
ಕಿರಣ್ ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ
‘ಖಾಸಗಿಯಲ್ಲಿ ರಸಗೊಬ್ಬರ ದುಬಾರಿ’
ಮುಂಗಾರು ಆರಂಭದಿಂದ ಬಿತ್ತನಗೆ ಸಿದ್ಧತೆ ನಡೆದಿದೆ. ಆದರೆ ಸಮರ್ಪಕವಾದ ಬಿತ್ತನೆ ಬೀಜ ರಸಗೊಬ್ಬರ ಲಭ್ಯವಾಗುತ್ತಿಲ್ಲ. ಕೃಷಿ ಇಲಾಖೆ ಕೇಂದ್ರಗಳಲ್ಲಿ ಪಹಣಿಗೆ ಇಂತಿಷ್ಟು ಪೂರೈಕೆ ಮಾಡಬೇಕು ಎಂದು ಸೀಮಿತಗೊಳಿಸಿದ್ದಾರೆ. ಖಾಸಗಿ ಅಂಗಡಿಗಳಲ್ಲಿ ಬೇಕಾ ಬಿಟ್ಟಿಯಾಗಿ ಬೆಲೆ ನಿಗದಿ ಪಡಿಸಿದ್ದಾರೆ. ಇದರಿಂದ ದುಪ್ಪಟ್ಟು ಹಣ ನೀಡಿ ಬಿತ್ತನೆ ಬೀಜ ರಸ ಗೊಬ್ಬರ ಖರೀದಿಸಬೇಕಿದೆ. ಖಾಸಗಿಯಲ್ಲಿ ಡಿಎಪಿ ರಸಗೊಬ್ಬರ 50 ಕೆ.ಜಿ.ಗೆ ₹1600ರ ವರೆಗೆ ದರ ನಿಗದಿ ಪಡಿಸಿದ್ದು ಇದು ಹೊರೆಯಾಗಿದೆ ಎಂದು ಚಿಕ್ಕದಾನವಂದಿ ಗ್ರಾಮದ ರೈತ ಸಿದ್ದಪ್ಪ ದೂರಿದರು.
ಸಿಗದ ರಸ ಗೊಬ್ಬರ; ಕೃಷಿಗೆ ಹಿನ್ನಡೆ
ಸಾಗರ ತಾಲ್ಲೂಕಿನ ಕರೂರು ಹೋಬಳಿ ವ್ಯಾಪ್ತಿಯಲ್ಲಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಕೆಲವು ಗೊಬ್ಬರಗಳು ದೊರೆಯುತ್ತಿಲ್ಲ. ರೈತರು ಕೃಷಿ ಇಲಾಖೆ ಕೇಂದ್ರಗಳಿಗೆ ಅಲೆದು ಸುಸ್ತಾಗಿದ್ದಾರೆ. ಇಲ್ಲಿ ಪೊಟ್ಯಾಷ್ ಯೂರಿಯಾ ಡಿಎಪಿ ಗೊಬ್ಬರದ ಕೊರತೆ ಹೆಚ್ಚಿದೆ. ಸಣ್ಣ ಹಿಡುವಳಿ ರೈತರಿಗೂ 3ರಿಂದ 5 ಚೀಲ ಗೊಬ್ಬರದ ಅವಶ್ಯಕತೆ ಇದೆ. ಆದರೆ ಗೊಬ್ಬರ ಮಾತ್ರ ಸಿಗುತ್ತಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ಹಿನ್ನೆಡೆಯಾಗಲಿದೆ ಎನ್ನುವುದು ರೈತರ ದೂರು.