ಶಿವಮೊಗ್ಗ: ಅಡಿಕೆಯೊಂದಿಗೆಬೆರೆತ ತಂಬಾಕುಉತ್ಪನ್ನಗಳನ್ನು ನಿಷೇಧಿಸಲಾಗುತ್ತದೆ. ಆದರೆ, ತಂಬಾಕು ತುಂಬಿರುವ ಸಿಗರೇಟಿನ ವಿರುದ್ಧ ಕ್ರಮ ಏಕಿಲ್ಲ ಎಂದು ಅಡಿಕೆ ಕಾರ್ಯಪಡೆ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದರು.

ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ವದಂತಿ ಕುರಿತು ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಶಾಸಕರಾದ ಎಚ್.ಹಾಲಪ್ಪ, ಎಂ.ಪಿ.ರೇಣುಕಾಚಾರ್ಯ, ಅಡಿಕೆ ಸಂಸ್ಥೆಗಳ ಮುಖಂಡರ ನಿಯೋಗ ಈಚೆಗೆ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿಚರ್ಚೆ ಮಾಡಿದ್ದೇವೆ. ಅವರು ರಾಜ್ಯದ ಬೆಳೆಗಾರರ ಹಿತ ರಕ್ಷಿಸುವ ಭರವಸೆ ನೀಡಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಡಿಕೆಗೆವಿಚಾರದಲ್ಲಿಸಿಗರೇಟ್ ಕಂಪನಿಗಳು ಲಾಭಿ ಮಾಡುತ್ತಿವೆ. ಜತೆಗೆ, ಹಿಂದಿನ ಕೇಂದ್ರ ಸರ್ಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದುಸುಪ್ರೀಂಕೋರ್ಟ್ಗೆಪ್ರಮಾಣಪತ್ರ ಸಲ್ಲಿಸಿತ್ತು. ವಿವಾದ ನ್ಯಾಯಾಲಯದಲ್ಲಿದೆ. ಅದಕ್ಕಾಗಿಯೇ ತಜ್ಞರ ನೆರವು ಪಡೆದಿದ್ದೇವೆ. ಎಂ.ಎಸ್. ರಾಮಯ್ಯವಿಶ್ವ ವಿದ್ಯಾಲಯಕ್ಕೆ ಅಡಿಕೆ ಸಂಶೋಧನೆ ಕೈಗೆತ್ತಿಕೊಂಡಿದೆ.ಅದಕ್ಕಾಗಿ ₹ 2ಕೋಟಿ ಖರ್ಚು ಮಾಡಲಾಗುತ್ತಿದೆ ಎಂದರು.

ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಮಿತಿವರದಿಸಿದ್ಧಪಡಿಸುವ ತನಕನ್ಯಾಯಾಲಯದಪ್ರಕರಣ ವಿಚಾರಣೆ ನಡೆಸಬಾರದು.ಮುಂದೂಡಬೇಕು ಎಂದು ಮನವಿ ಮಾಡಲಾಗಿದೆ. ಸಮಿತಿ ನೀಡುವ ವರದಿ ಆಧಾರದಲ್ಲಿ ನ್ಯಾಪ್ರಕರಣ ನಿಂತಿದೆ. ಅಡಿಕೆ ಬೆಳೆ ಹಾನಿಕಾರಕ ಅಲ್ಲ ಎಂಬ ವಿಷಯ ಸಾಬೀತುಪಡಿಸಲಾಗುವುದು.ಬೆಳೆಗಾರರಿಗೆ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ವಿರೋಧ:

ಕಸ್ತೂರಿ ರಂಗನ್ ವರದಿ ಜಾರಿಯಾದರೆಜಿಲ್ಲೆಯ166ಗ್ರಾಮಗಳ ಜನರಿಗೆ ಸಂಕಷ್ಟ ಎದುರಾಗಲಿದೆ. ವರದಿ ಅನ್ವಯ ಸುಮಾರು10 ಕಿ.ಮೀ.ವ್ಯಾಪ್ತಿಯ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲಾಗುತ್ತದೆ. ಅಲ್ಲಿ ಯಾವ ಅಭಿವೃದ್ಧಿಕೆಲಸವೂ ಆಗುವುದಿಲ್ಲ. ಮನೆ ಕಟ್ಟುವುದು,ಗದ್ದೆಗೆ ಔಷಧ ಸಿಂಪಡಣೆ, ಕಲ್ಲು, ಮರಳು ತೆಗೆಯುವಂತಿಲ್ಲ.ಇದು ಮಲೆನಾಡಿನ ಜನರಿಗೆ ಮರಣ ಶಾಸನವಾಗಲಿದೆ ಎಂದರು.

ಹಸಿರುಪೀಠ ವರದಿ ಜಾರಿ ಒತ್ತಡ ಹಾಕುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೇಂದ್ರ ಸಚಿವರ ಜತೆಮಾತನಾಡಿದ್ದಾರೆ. ಒಪ್ಪಿಗೆ ಇಲ್ಲದೇ ಜಾರಿ ಮಾಡಬಾರದುಎಂದು ಕೋರಿದ್ದಾರೆ. ಈ ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ಸೂಕ್ತ ವಕೀಲರನ್ನು ನೇಮಕ ಮಾಡುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡರನ್ನು ನಿಯಮದ ಅನ್ವಯವೇ ಅನರ್ಹಗೊಳಿಸಲಾಗಿದೆ. ಕೇಂದ್ರ ಸರ್ಕಾರ ರೈತರಿಗೆ ಬಿಡುಗಡೆ ಮಾಡಿದ್ದ ಹಣ ಮನಬಂದಂತೆ ಹಂಚಿಕೆ ಮಾಡಿದ್ದಾರೆ. ತೀರ್ಥಹಳ್ಳಿ ಕ್ಷೇತ್ರಕ್ಕೆ ಹಣ ನೀಡಿಲ್ಲ. ರೈತರ ಬ್ಯಾಂಕ್ ಮತ್ತಷ್ಟು ಸಶಸಕ್ತವಾಗಬೇಕು ಎಂಬುದುಎಲ್ಲರಆಶಯ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಸತೀಶ್ ಚಂದ್ರ, ಮಾಜಿ ಅಧ್ಯಕ್ಷ ಪದ್ಮನಾಭ್,ಚನ್ನಗಿರಿ ತುಮ್ಕೋಸ್ ಮಾಜಿ ಅಧ್ಯಕ್ಷ ಶಿವಕುಮಾರ್, ದಯಾನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.