ಸೊರಬ: ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗರು ಉತ್ತಮ ಬದುಕು ಕಟ್ಟಿಕೊಳ್ಳಲು ಆಸರೆಯಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಸ್ಥಳೀಯ ಅಭಿವೃದ್ಧಿಗೆ ಮುನ್ನುಡಿ ಬರೆದಿದೆ. ಯೋಜನೆ ಅಡಿ ತಾಲ್ಲೂಕಿನಲ್ಲೇ ಮೊದಲ ‘ಹಳ್ಳಿ ಸಂತೆ’ ಮಾರುಕಟ್ಟೆ ನಿರ್ಮಾಣ ಆಗಿದ್ದು, ಜನಮನ್ನಣೆ ಗಳಿಸಿದೆ.

ತಾಲ್ಲೂಕಿನ ದೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಹಳ್ಳಿ ಸಂತೆ’ ಮಾರುಕಟ್ಟೆ ನಿರ್ಮಾಣಕ್ಕೆ 2023– 24ನೇ ಸಾಲಿನಲ್ಲಿ ₹ 16.60 ಲಕ್ಷ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ತು. ಇದೀಗ ಮೂಲಕ 721 ಮಾನವ ದಿನಗಳನ್ನು ಬಳಸಿ ₹ 16.39 ಲಕ್ಷ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.

ಉಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ದೂಗೂರು ಗ್ರಾಮ 2015ರಲ್ಲಿ ಸ್ವತಂತ್ರ ಗ್ರಾಮ ಪಂಚಾಯಿತಿ ಸ್ಥಾನಮಾನ ಪಡೆದು ಬೇರ್ಪಟ್ಟಿತ್ತು. ತಾಲ್ಲೂಕು ಕೇಂದ್ರದಿಂದ 13 ಕಿ.ಮೀ. ದೂರದಲ್ಲಿನ ದೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 11 ಗ್ರಾಮಗಳು ಒಳಪಟ್ಟಿದ್ದು, 3,737 ಜನಸಂಖ್ಯೆ ಇದೆ. ಇಲ್ಲಿನ ಗ್ರಾಮಸ್ಥರು ಕೃಷಿ ಜತೆ ಮನರೇಗಾ ಯೋಜನೆಯನ್ನು ಅವಲಂಬಿತರಾಗಿ ಜೀವನ ಕಟ್ಟಿಕೊಂಡಿದ್ದಾರೆ.

2024– 25ನೇ ಸಾಲಿನಲ್ಲಿ 12,000 ಮಾನವ ದಿನಗಳ ಗುರಿಯಲ್ಲಿ 9,000 ಮಾನವ ದಿನಗಳನ್ನು ಸೃಜಿಸಿ ಕೆರೆ, ಕಾಲುವೆ ಸೇರಿದಂತೆ ಗ್ರಾಮಾಭಿವೃದ್ಧಿಗೆ ಶ್ರಮಿಸಿದ್ದಾರೆ. ಇಲ್ಲಿನ ಜನರು ಕೃಷಿಯನ್ನೇ ನಂಬಿ ವಾಣಿಜ್ಯ ಬೆಳೆ ಜತೆಗೆ ಕುಟುಂಬ ನಿರ್ವಹಣೆಗೆ ಹೂ–ತರಕಾರಿ ಬೆಳೆಗೆ ಒತ್ತು ನೀಡುತ್ತ ಬಂದಿದ್ದಾರೆ. ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಹಾಗೂ ಖರೀದಿಗಾಗಿ ದೂರದ ಸೊರಬ, ಸಾಗರ ಸಂತೆ ಮಾರುಕಟ್ಟೆಗೆ ತೆರಳಬೇಕಿತ್ತು. ಅಲ್ಲದೆ ಗ್ರಾಮದ ರಸ್ತೆ ಇಕ್ಕೆಲಗಳಲ್ಲೇ ತರಕಾರಿ ಮಾರಾಟ ಮಾಡಬೇಕಿತ್ತು.

ಇದನ್ನು ಗಮನಿಸಿದ ಮನರೇಗಾ ಅಧಿಕಾರಿಗಳು ಯೋಜನೆಯಡಿ ಗ್ರಾಮೀಣ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಚರ್ಚಿಸಿದರು. ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರು ಇದಕ್ಕೆ ಒತ್ತಾಸೆಯಾಗಿ ನಿಂತ ಕಾರಣ ಸುಸಜ್ಜಿತವಾದ ಹಳ್ಳಿಸಂತೆ ಮಾರುಕಟ್ಟೆ ತಲೆ ಎತ್ತಿದ್ದು, ಜುಲೈ 3ರಿಂದ ವ್ಯಾಪಾರ ವಹಿವಾಟು ನಡೆಯುತ್ತಿದೆ.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೃಷಿ ಪ್ರಧಾನ ಕುಟುಂಬಗಳೇ ಹೆಚ್ಚಿದ್ದು, ಪ್ರತಿ ಶುಕ್ರವಾರ ನಡೆಯುವ ಸಂತೆಗೆ ತಾವು ಬೆಳೆದ ಹೂ, ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ಈ ಹಳ್ಳಿಸಂತೆ ಅನುಕೂಲಕರವಾಗಿ ಪರಿಣಮಿಸಿದೆ. ಅಲ್ಲದೇ ಹಲವು ದಿನಸಿ ಅಂಗಡಿಗಳು ಸಂತೆಗೆ ಸೇರುತ್ತಿವೆ. ಗ್ರಾಮಸ್ಥರು ಹಾಗೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದೂಗೂರು ಹಳ್ಳಿಸಂತೆ ಮಾರಕಟ್ಟೆ ನಿರ್ಮಾಣ ಮಾಡುವ ಮೂಲಕ ಪಂಚಾಯಿತಿ ಆದಾಯ ವೃದ್ಧಿಸಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಫಯಾಜ್ ಅಹ್ಮದ್.

ಗ್ರಾಮಸ್ಥರಿಗೆ ಅನುಕೂಲ

ಮನರೇಗಾ ಯೋಜನೆಯಡಿ ತಾಲ್ಲೂಕಿನಲ್ಲಿ ಮೊದಲ ಹಳ್ಳಿಸಂತೆ ನಿರ್ಮಾಣಗೊಂಡಿದ್ದು ಸುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಿದೆ. ಅಧಿಕ ಕೂಲಿ ಕೆಲಸ ಮಾಡುವುದರ ಜತೆ ಶೇ 40ರಷ್ಟು ಸಾಮಗ್ರಿ ವೆಚ್ಚವನ್ನು ಬಳಸಿಕೊಳ್ಳಲು ಅವಕಾಶವಿದ್ದು ಇದರ ಅಡಿಯಲ್ಲಿ ಹಳ್ಳಿ ಸಂತೆ ಕಾಮಗಾರಿ ಪೂರ್ಣಗೊಂಡಿದೆ. ಶಶಿಧರ್ ಇಒ ಸೊರಬ ತಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.