ಶಿವಮೊಗ್ಗ: ಲಾಕ್‌ಡೌನ್‌ನಿಂದಾಗಿ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಗುರುವಾರದಿಂದ ಆರಂಭಗೊಂಡಿದೆ. ಬಸ್ ಪ್ರಯಾಣ ದರವೂ ಶೇ 20ರಷ್ಟು ಹೆಚ್ಚಳಗೊಂಡಿದೆ.

ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿದ್ದು, ಮೊದಲ ದಿನ 100ಕ್ಕೂ ಹೆಚ್ಚು ಬಸ್‌ಗಳು ರಸ್ತೆಗಿಳಿದಿದ್ದವು. ಕನಿಷ್ಠ ಪ್ರಯಾಣ ದರ ₹ 10 ಇದ್ದದ್ದು ಈಗ ₹ 12ಕ್ಕೆ ಏರಿಸಲಾಗಿದೆ. 2.1 ಕಿ.ಮೀ.ನಿಂದ 4 ಕಿ.ಮೀ.ವರೆಗೆ ಕಳೆದ ವರ್ಷ ₹ 10 ಇದ್ದದ್ದು ಈಗ ₹ 13ಕ್ಕೆ ಏರಿಸಲಾಗಿದೆ.

‘ಸದ್ಯ ಜಾರಿಯಲ್ಲಿರುವ ಬಸ್ ಪ್ರಯಾಣ ದರವು ಡೀಸೆಲ್ ಬೆಲೆ ₹ 56 ಇದ್ದಾಗ ಏರಿಕೆ ಮಾಡಿದ್ದಾಗಿದೆ. ಆ ಬಳಿಕ ಏರಿಕೆ ಮಾಡಿಲ್ಲ. ಈಗ ಡೀಸೆಲ್ ಬೆಲೆ ₹ 93 ದಾಟಿದೆ. ಸದ್ಯ ನಾವು ಶೇ 20ರಷ್ಟು ಮಾತ್ರ ದರ ಹೆಚ್ಚಿಸಿದ್ದೇವೆ. ಡೀಸೆಲ್ ಮತ್ತು ವಾಹನಗಳ ಬಿಡಿ ಭಾಗಗಳಿಗೆ ಏರಿಕೆಯಾದ ದರಕ್ಕೆ ಅನ್ವಯಿಸಿದಾಗ ಸದ್ಯ ಏರಿಕೆಯಾದ ಬಸ್ ಪ್ರಯಾಣ ದರವು ಹೆಚ್ಚೇನೂ ಅಲ್ಲ’ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಆರ್.ರಂಗಪ್ಪ ತಿಳಿಸಿದರು.

ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಸೇರಿ ಉಡುಪಿ, ಮಂಗಳೂರು, ಚಿತ್ರದುರ್ಗ ಮೊದಲಾದ ಜಿಲ್ಲೆಗಳಿಗೆ ಬಸ್ ಸಂಚರಿಸಿದವು. ಕೆಲವು ಮಾರ್ಗದ ಬಸ್‌ಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿ ಮೀರಿ ಪ್ರಯಾಣಿಕರು ತುಂಬಿದ್ದರು.

ಖಾಸಗಿ ಬಸ್ ಸಂಚಾರಕ್ಕೆ ಹಲವು ಸವಾಲು: ‘ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿದಿದ್ದು, ಜನರು ಖಾಸಗಿ ಬಸ್ ಯಾವಾಗ ರಸ್ತೆಗಿಳಿಯಲಿವೆ ಎಂದು ಕಾಯುತ್ತಿದ್ದರು. ಈಗ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ್ದು, ಸದ್ಯ ಕೆಲವೇ ಕೆಲವು ಬಸ್‌ಗಳು ಸಂಚಾರ ಆರಂಭಿಸಿವೆ.ಖಾಸಗಿ ಬಸ್ ಮಾಲೀಕರಿಗೆ ಬಸ್ಸುಗಳನ್ನು ರಸ್ತೆಗಿಳಿಸುವ ತವಕವಿದೆ. ಆದರೆ ಪ್ರಮುಖ ಸವಾಲುಗಳು ಅವರನ್ನು ಕಾಡುತ್ತಿವೆ. ಇದೆ ಕಾರಣಕ್ಕೆ ಬಸ್ ಸಂಚಾರ ಶುರು ಮಾಡಲು ಹತ್ತಾರು ಭಾರಿ ಯೋಚಿಸುವಂತಾಗಿದೆ’ ಎಂದು ರಂಗಪ್ಪ ತಿಳಿಸಿದ್ದಾರೆ.

ರಸ್ತೆ ತೆರಿಗೆಯ ಹೊರೆ: ‘ಎರಡು ತಿಂಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ. ಕಳೆದ ವರ್ಷ 9 ತಿಂಗಳು ಬಸ್‌ಗಳನ್ನು ನಿಲ್ಲಿಸಿದ್ದೆವು. ಕೊರೊನಾ ಲಾಕ್‌ಡೌನ್ ಕಾರಣ ದುಡಿಮೆಯೇ ಇಲ್ಲ. ಆದರೂ, ಸರ್ಕಾರಕ್ಕೆ ನಾವು ರಸ್ತೆ ತೆರಿಗೆ ಪ್ರತಿ ಮೂರು ತಿಂಗಳಿಗೆ ₹ 50 ಸಾವಿರ ಪಾವತಿಸಬೇಕು. ಈಗಾಗಲೇ ಸರ್ಕಾರಕ್ಕೆ ಪರ್ಮಿಟ್ ಸರೆಂಡರ್ ಮಾಡಿದ್ದೇವೆ. ಅದನ್ನು ಹಿಂಪಡೆದ ದಿನದಿಂದಲೇ ತೆರಿಗೆ ಆರಂಭವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕನಿಷ್ಠ ಆರು ತಿಂಗಳ ರಸ್ತೆ ತೆರಿಗೆಯನ್ನು ಮನ್ನಾ ಮಾಡಬೇಕು. ಇಲ್ಲ ವಿನಾಯಿತಿಯಾದರೂ ನೀಡಬೇಕು’ ಎಂದು ಬಸ್ ಮಾಲೀಕರು ಒತ್ತಾಯಿಸಿದ್ದಾರೆ.

ರಿಪೇರಿ ಖರ್ಚು ಹೆಚ್ಚು: ಲಾಕ್‌ಡೌನ್‌ನಿಂದಾಗಿ ಬಸ್‌ಗಳು ನಿಂತಲ್ಲೇ ನಿಂತು ಕೆಟ್ಟುಹೋಗಿರುತ್ತವೆ. ಈಗ ಬಸ್ ಹೊರ ತೆಗೆಯಬೇಕು ಎಂದರೆ, ಹೊಸ ಬ್ಯಾಟರಿ ಬೇಕು. ಪ್ರತಿ ಬಸ್‌ಗೆ ಕನಿಷ್ಠ ₹ 10 ಸಾವಿರ ಬೇಕು. ಇನ್ನು ಬಿಡಿಭಾಗಗಳ ಬೆಲೆ ಹೆಚ್ಚಿದೆ. ಆದಾಯವೇ ಇಲ್ಲದೆ ಇರುವ ಸಂದರ್ಭದಲ್ಲಿ ಇದನ್ನು ಹೊಂದಿಸಿಕೊಂಡು ಬಸ್ ರಸ್ತೆಗಿಳಿಸುವುದು ಸದ್ಯದ ಸವಾಲುಗಳಲ್ಲಿ ಒಂದಾಗಿದೆ.

ಡೀಸೆಲ್ ಬೆಲೆ ಏರಿಕೆಯ ಬಿಸಿ: ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ದೂರದ ಊರುಗಳಿಗೆ ತೆರಳುವ ಬಸ್‌ಗಳಿಗೆ ಪ್ರತಿದಿನ ಫುಲ್ ಟ್ಯಾಂಕ್ ಮಾಡಿಸಬೇಕು. ಫುಲ್ ಟ್ಯಾಂಕ್ ಡೀಸೆಲ್ ತುಂಬಿಸಲು ₹ 10 ಸಾವಿರ ಬೇಕು. ತಿಂಗಳಿಗೆ ಕನಿಷ್ಠ ₹ 3 ಲಕ್ಷ ಬೇಕು. ಆದರೆ, ಈ ಸಂದರ್ಭದಲ್ಲಿ ಅಷ್ಟು ಆದಾಯ ನಿರೀಕ್ಷೆ ಮಾಡುವುದು ಕಷ್ಟ ಸಾಧ್ಯ ಎನ್ನುತ್ತಾರೆ ಬಸ್ ಮಾಲೀಕರು.

ಶೇ 50ರಷ್ಟು ಪ್ರಯಾಣಿಕರು: ಕೋವಿಡ್ ನಿಯಮದಂತೆ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಬಸ್‌ನಲ್ಲಿ ಪ್ರಯಾಣಿಸಲು ಅವಕಾಶವಿದೆ. ಅದರಿಂದ ಬರುವ ಆದಾಯ ಯಾವುದಕ್ಕೂ ಸಾಲುವುದಿಲ್ಲ. ಆದಾಯ ಇಲ್ಲದೆ ಡೀಸೆಲ್ ಹಾಕಿಸುವುದೆಲ್ಲಿ? ರಿಪೇರಿ ಮಾಡಿಸುವುದು ಹೇಗೆ? ಕಾರ್ಮಿಕರಿಗೆ ಸಂಬಳ ಕೊಡಲು ಆಗುತ್ತದೆಯೇ? ಎಂಬುದು ಬಸ್ ಮಾಲೀಕರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.