ಪ್ರಜಾವಾಣಿ ವಾರ್ತೆ

ಶಿಕಾರಿಪುರ: ‘ಅತಿಥಿ ಉಪನ್ಯಾಸಕರ ಸೇವಾ ವಿಲೀನವನ್ನು ಸಚಿವ ಸಂಪುಟದಲ್ಲಿ ಇತ್ಯರ್ಥಗೊಳಿಸಬೇಕು’ ಎಂದು ಒತ್ತಾಯಿಸಿ ಪಟ್ಟಣದ ಆಡಳಿತಸೌಧ ಸಭಾಂಗಣದಲ್ಲಿ ಸೋಮವಾರ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಅಧ್ಯಕ್ಷ ಸೇವಾ ಸೋಮಶೇಖರ್ ಶಿಮೊಗ್ಗಿ ಮಾತನಾಡಿ, ‘ಅತಿಥಿ ಉಪನ್ಯಾಸಕರ ಸೇವೆಯನ್ನು ವಿಲೀನಗೊಳಿಸಲು ಕರ್ನಾಟಕ ನಾಗರಿಕ ನಿಯಮ 1977/140 ಅಡಿ ಅವಕಾಶವಿದೆ. ಈ ನಿಯಮದ ಅಡಿ ಅತಿಥಿ ಉಪನ್ಯಾಸಕರ ಸೇವೆ ವಿಲೀನಗೊಳಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇವೆ ವಿಲೀನಗೊಳಿಸಲು ಮಧ್ಯ ಪ್ರವೇಶಿಸಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಕಾಲೇಜು ಶಿಕ್ಷಣ ಇಲಾಖೆ ಪುನಃ ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿ ಇರುವಾಗ ಆನ್‌ಲೈನ್ ಮೂಲಕ ಅರ್ಜಿ ಕರೆಯುವ ಸಿದ್ಧತೆ ತೆರೆಮರೆಯಲ್ಲಿ ನಡೆಸುತ್ತಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಪ್ರಕ್ರಿಯೆಯಿಂದ ಅತಿಥಿ ಉಪನ್ಯಾಸಕರು ಮತ್ತೆ ಆತಂಕಕ್ಕೆ ಈಡಾಗಿದ್ದಾರೆ. ಅತಿಥಿ ಉಪನ್ಯಾಸಕರ ಸೇವಾ ವಿಲೀನ ವಿಚಾರ ಸಚಿವ ಸಂಪುಟ ಸಮಿತಿ ಮುಂದೆ ತರಲು ಒತ್ತಾಯಿಸಿ ನಾಳೆಯಿಂದ ತರಗತಿ ಬಹಿಷ್ಕಾರ ಮಾಡಿ ಮುಷ್ಕರಕ್ಕೆ ಸಮಿತಿ ಕರೆ ನೀಡಿದೆ’ ಎಂದರು.

ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಪದಾಧಿಕಾರಿಗಳಾದ ಡಾ.ರವೀಂದ್ರ ಮೈಸೂರು, ಕೆ. ರಾಜೇಶ್ ಕುಮಾರ್, ನಾಗರಾಜ್ ಮದ್ದೂರು, ನಾಗರಾಜ್ ಅರಸಿಕೆರೆ, ಪಿ.ಸಿ. ಲೋಕೇಶ್ ತುಮಕೂರು, ಶಂಕರ ನಾಯ್ಕ ದಾವಣಗೆರೆ, ಆಶಾ, ಧನಂಜಯ, ಈಶ್ವರ್, ಕೆ. ಸುಮಾ, ಸಿ.ಎಸ್. ಪರಿಮಳ, ಶಶಿಕಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.