ಕುಂಸಿ ಸಮೀಪದ ಮಲೆಶಂಕರದಲ್ಲಿ ಶನಿವಾರ ಸಿಡಿಲು ಬಡಿದು ಶೇಖರಪ್ಪ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.
ರಿಪ್ಪನ್ ಪೇಟೆಯಲ್ಲಿ ಶನಿವಾರ ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿಯಿತು
ಶಿವಮೊಗ್ಗದ ವಿನೋಬ ನಗರದ 100 ಅಡಿ ರಸ್ತೆಯಲ್ಲಿ ಮಳೆಯ ಆರ್ಭಟಕ್ಕೆ ಮರದ ಕೊಂಬೆ ಮುರಿದುಬಿದ್ದಿತು.
ಕುಂಸಿ: ಮನೆ ಮೇಲೆ ಬಿದ್ದ ಮರ
ಕುಂಸಿ ವರದಿ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. ಸಮೀಪದ ಶೆಟ್ಟಿಕೆರೆ ಕೊರಗಿ ಚೋಡನಾಳ ತುಪ್ಪೂರು ಚೋರಡಿ ಆಯನೂರು ಹಾರನಹಳ್ಳಿ ತಮ್ಮಡಿಹಳ್ಳಿ ಕಲ್ಲುಕೊಪ್ಪ ಮತ್ತು ಮಲೆಶಂಕರದಲ್ಲಿ ಮಳೆಯಾಗಿದೆ. ಮಳೆ ಮತ್ತು ಸಿಡಿಲು ಬಡಿದು ಮಲೆಶಂಕರದ ಶೇಖರಪ್ಪ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ.ಸದ್ಯ ಮನೆಯಲ್ಲಿರುವ ಯಾವುದೇ ಸದಸ್ಯರಿಗೆ ಅಪಾಯವಾಗಿಲ್ಲ.