ಆಗುಂಬೆ, ಮೇಗರವಳ್ಳಿ, ಕಮ್ಮರಡಿ, ಬಿದರಗೋಡು, ತೀರ್ಥಮುತ್ತೂರು, ರಾಮಕೃಷ್ಣಪುರ, ಬಸವಾನಿ, ದೇವಂಗಿ, ಕಟ್ಟೇಹಕ್ಕಲು, ಭಾರತೀಪುರ, ಕುಡುಮಲ್ಲಿಗೆ ಮಾಳೂರು, ಆರಗ, ಕೋಣಂದೂರು, ಅರಳಸುರಳಿ, ಮಂಡಗದ್ದೆ, ಕನ್ನಂಗಿ, ಹಣಗೆರೆಕಟ್ಟೆ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗಿದೆ. ಸಾಯಂಕಾಲದ ನಂತರ ಗುಡುಗು, ಸಿಡಿಲು ಸಹಿತ ಮುಂಜಾನೆವರೆಗೂ ಮಳೆ ಬಿಡದೆ ಮಳೆ ಸುರಿಯುತ್ತಿದೆ. ಹಗಲು ಬಿಸಿಲಿನ ಬೇಗೆ ಮುಂದುವರಿದಿದೆ.